Breaking
22 Mar 2026, Sun

ಸಕಲ ಸಿದ್ಧತೆಯೊಂದಿಗೆ ಪುತ್ತೂರಿಗೆ ಆಗಮಿಸಿದ ಎನ್‌. ಡಿ. ಆರ್‌ ಎಫ್‌ ತಂಡ

ಪುತ್ತೂರು: ಜಿಲ್ಲೆಯಾದ್ಯಂತ ನಿರಂತರವಾಗಿ ಭಾರೀ ಮಳೆ ಮುಂದುವರಿದ ಹಿನ್ನಲೆ ಅಲ್ಲಲ್ಲಿ ಅವಘಡ ಸಂಭವಿಸುತ್ತಿದ್ದು, ಪುತ್ತೂರಿನ ಪರಿಸ್ಥಿತಿ ನಿರ್ವಹಣೆಗೆ ಎನ್‌. ಡಿ. ಆರ್‌ ಎಫ್‌ ತಂಡ ಆಗಮಿಸಿದೆ.

ಈ ತಂಡ ಮುಖ್ಯವಾಗಿ ಪುತ್ತೂರನ್ನು ಕೇಂದ್ರವಾಗಿರಿಸಿ‌ ಕಾರ್ಯಾಚರಣೆ ನಡೆಸಲಿದ್ದು, ಬಳಿಕ ಮಳೆಯಿಂದ‌ ಹೆಚ್ಚು ಹಾನಿಗೊಳಗಾಗುವ ಬೆಳ್ತಂಗಡಿ, ಕಡಬ, ಬಂಟ್ವಾಳ, ಸುಳ್ಯ ತಾಲೂಕಿನ ಪರಿಸ್ಥಿತಿ ಅವಲೋಕಿಸಲಿದೆ. ಕಾರ್ಯಾಚರಣೆಯ ವೇಳೆ ಈ ತಂಡದ ಜೊತೆಗೆ ಅಪಾಯಕ್ಕೊಳಗಾದ ಜನರನ್ನು ಪತ್ತೆಹಚ್ಚಲು ಶ್ವಾನ ಬಳಸಲಾಗುತ್ತಿದೆ.

ಕಾರ್ಯಾಚರಣೆಗೆ ಬೇಕಾದ ಎಲ್ಲಾ ಸಾಮಾಗ್ರಿಗಳನ್ನು ಈಗಾಗಲೇ NDRF ತಂಡ ಸಜ್ಜುಗೊಳಿಸಿದ್ದು, ಪುತ್ತೂರಿನ ಎಪಿಎಂಸಿ ಸಭಾಂಗಣದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.

ಪುತ್ತೂರು ಹಾಗೂ ಮಡಿಕೇರಿಗೆ ಎರಡು ಟೀಂ ಆಗಿ ಬಂದ ಎನ್ ಡಿ ಆರ್ ಎಫ್ ನಲ್ಲಿ ಮಡಿಕೇರಿಗೆ ಸುಮಾರು 30 ಸದಸ್ಯರನ್ನೊಳಗೊಂಡ ತಂಡ ಆಗಮಿಸಿದೆ.

Leave a Reply

Your email address will not be published. Required fields are marked *