Breaking
21 Sep 2026, Mon

ಎಸ್.ಸಿ.ಡಿ.ಸಿ.ಸಿ.ಬ್ಯಾಂಕ್ ಸಿಬ್ಬಂದಿ ಕೇಶವ ಕಿಣಿ .ಎಚ್ ಹೃದಯಾಘಾತದಿಂದ ನಿಧನ

ಬಂಟ್ವಾಳ: ಎಸ್. ಸಿ. ಡಿ. ಸಿ. ಸಿ. ಬ್ಯಾಂಕ್ ಸಿಬ್ಬಂದಿ ಕೇಶವ ಕಿಣಿ ಎಚ್ ಅವರು ಮೇ 25 ರಂದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಬ್ಯಾಂಕ್ ನಲ್ಲಿ ಹಾಗೂ ಬಂಟ್ವಾಳದಲ್ಲಿ ಕಿಣಿ ಎಂದೇ ಪ್ರಸಿದ್ದಿ ಪಡೆದ ಇವರು ಡಿ.ಸಿ.ಸಿ. ಬ್ಯಾಂಕ್ ನಲ್ಲಿ ಜೂನಿಯರ್ ಸೂಪರ್ ವೈಸರ್ ಮತ್ತು ಕ್ಲರಿಕಲ್ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಹಾಗೂ ವಲಯ ಮೇಲ್ವಿಚಾರಕರಾಗಿಯೂ ಸೇವೆ ಸಲ್ಲಿಸಿದ್ದರು.

ಮೃತರು ತಾಯಿ ಹಾಗೂ ಇಬ್ಬರು ಸಹೋದರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಇವರ ಅಗಲುವಿಕೆಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಮಾಜಿ ಸಚಿವ ರಮಾನಾಥ ರೈ , ಡಿ.ಸಿ.ಸಿ. ಬ್ಯಾಂಕ್ ಎಂಡಿ.ಗೋಪಿನಾಥ್ ಭಟ್ , ನಿರ್ದೇಶಕ ರಾಜರಾಮ್ ಭಟ್ , ಪದ್ಮಶೇಖರ್ ಜೈನ್, ಪ್ರಕಾಶ್ ಶೆಟ್ಟಿ ತುಂಬೆ, ಸಹಿತ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *