Breaking
22 Mar 2026, Sun

ದ.ಕ ಜಿಲ್ಲೆಯಲ್ಲಿ ಭಾರೀ ಮಳೆ: ಹೆಚ್ಚಾದ ಅಪಘಾತ, ಅವಘಡ: ತುಂಬಿ ಹರಿಯುತ್ತಿರುವ ನದಿಗಳು!

ದ.ಕ: ವಾಯುಭಾರ ಕುಸಿತ ಉಂಟಾಗಿ ದಕ್ಷಿಣ ಜಿಲ್ಲೆಯಲ್ಲಿ ಒಂದೇ ಸಮನೆ ಭಾರೀ ಮಳೆ ಸುರಿಯುತ್ತಿದ್ದು ನದಿಗಳೆಲ್ಲ ತುಂಬಿ ಹರಿಯುತ್ತಿದೆ. ಜೊತೆಗೆ ರಸ್ತೆ ಅಪಘಾತ, ಅವಘಡಗಳು ಹೆಚ್ಚಾಗಿದೆ.
ಕುಂಟಿಕಾನದ ಬಾರೆಬೈಲ್ ಎಂಬಲ್ಲಿ ಭಾರೀ ಗಾಳಿ ಮಳೆಗೆ ಮನೆ ಮೇಲೆ ಬೃಹತ್‌ ಗಾತ್ರದ ಮರವೊಂದು ಉರುಳಿಬಿದ್ದು ಮನೆಗೆ ಹಾನಿ ಉಂಟಾಗಿದೆ.

ಕಡಬ: ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮರ
ನೂಜಿಬಾಳ್ತಿಲ ಸಮೀಪದ ಕನ್ವಾರೆ ಎಂಬಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ನಾಲ್ವರು ಗಾಯಗೊಂಡಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯದಿಂದ ಇಚ್ಚಂಪಾಡಿ ಮೂಲಕ ಧರ್ಮಸ್ಥಳಕ್ಕೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ಕಾರು ಸಂಪೂರ್ಣ ಜಖಂಗೊಂಡಿದೆ.



ಕಾರಿನಲ್ಲಿದ್ದ ಚಾಲಕ, ಇಬ್ಬರು ಮಹಿಳೆಯರು, ಹಾಗೂ ಮಗುವಿಗೆ ತೀವ್ರ ಗಾಯವಾಗಿದ್ದು ತಕ್ಷಣ ಸ್ಥಳೀಯರು ನಾಲ್ವರನ್ನು ಕಾರಿನಿಂದ ಹೊರತೆಗೆದು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಿದ್ದಾರೆ.

ಪೆರ್ನೆ : ನಿಯಂತ್ರಣ ತಪ್ಪಿ ಕಾರು ಪಲ್ಟಿ
ಪೆರ್ನೆಯ ಸತ್ತಿಕಲ್‌ ಪೆಟ್ರೋಲ್‌ ಬಂಕ್‌ ಬಳಿ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಪಲ್ಟಿಯಾಗಿದ್ದು, ಚಾಲಕ ಸಣ್ಣಪುಟ್ಟ ಗಾಯದೊಂದಿಗೆ ಬಚಾವ್‌ ಆಗಿದ್ದಾರೆ.

ತುಂಬಿ ಹರಿಯುತ್ತಿರುವ ಬೆಳ್ತಂಗಡಿ ತಾಲೂಕಿನ ನದಿಗಳು
ನಿರಂತರವಾಗಿ ಸುರಿದ ಮಳೆಯಿಂದ ನೇತ್ರಾವತಿ, ಮೃತ್ಯುಂಜಯ, ಸೋಮವತಿ, ಕಪಿಲ, ಪಲ್ಗುಣಿ ಸೇರಿದಂತೆ ತಾಲೂಕಿನ ಎಲ್ಲಾ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ.

ಮಳೆಯಾರ್ಭಟ ಮತ್ತಷ್ಟು ಮುಂದುವರಿದಿದ್ದು ಜನರು ಎಚ್ಚರ ವಹಿಸಬೇಕಿದೆ.



Leave a Reply

Your email address will not be published. Required fields are marked *