Breaking
22 Mar 2026, Sun

ಮೂಡಬಿದ್ರೆಯ ಎರುಗುಂಡಿ ಫಾಲ್ಸ್ ನಲ್ಲಿ ಸ್ಥಳೀಯರಿಂದ ಪ್ರವಾಸಿಗರ ರಕ್ಷಣೆ

ಮೂಡಬಿದ್ರೆ: ಫಾಲ್ಸ್ ಗೆ ಹೋಗಿ ಸಂಕಷ್ಟಕ್ಕೆ ಸಿಲುಕ್ಕಿದ್ದ ಪ್ರವಾಸಿಗರನ್ನು ಸ್ಥಳೀಯರು ರಕ್ಷಣೆ ಮಾಡಿರುವ ಘಟನೆ ಮೂಡಬಿದ್ರೆಯ ಎರುಗುಂಡಿ ಫಾಲ್ಸ್ ನಲ್ಲಿ ಮೇ.26 ರಂದು ನಡೆದಿದೆ.

ಎರುಗುಂಡಿ ಫಾಲ್ಸ್ ನಲ್ಲಿ ನೀರಿನ ಅಪಾಯ ಲೆಕ್ಕಿಸದೆ ಪ್ರವಾಸಿಗರು ನೀರಿನಲ್ಲಿ ಆಟಕ್ಕೆ ಇಳಿದಿದ್ದಾರೆ. ಈ ವೇಳೆ ಮಳೆ ಜೊತೆ ನೀರಿನ ರಭಸವೂ ಹೆಚ್ಚಾಗಿದ್ದು, ನೀರಿನಲ್ಲಿ ಸಿಲುಕಿದ್ದ ಪ್ರವಾಸಿಗರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.

ಮಳೆಗಾಲ ಸಂದರ್ಭದಲ್ಲಿ ಅಪಾಯಕಾರಿಯಾಗಿ ಹರಿಯುವ ಎರಗುಂಡಿ ಫಾಲ್ಸ್ ನಲ್ಲಿ ಈ ಮೊದಲು ಹಲವಾರು ಪ್ರವಾಸಿಗರು ಪ್ರಾಣ ಕಳೆದುಕೊಂಡಿದ್ದಾರೆ. ಆದರೂ ಬುದ್ದಿ ಕಲಿಯಲಿದ ಜನ ಮತ್ತೆ ಮಳೆ ಸುರಿಯುತ್ತಿದ್ದರೂ ಫಾಲ್ಸ್ ಬಳಿ ಮೋಜಿನಾಟಕ್ಕೆ ತೆರಳಿದ್ದಾರೆ.

ಈ ನಿಟ್ಟಿನಲ್ಲಿ ಇಂತಹ ಪ್ರದೇಶದಲ್ಲಿ ಪ್ರವಾಸಿಗರ ರಕ್ಷಣೆ ಮಾಡುವುದರ ಕುರಿತಂತೆ ಜಿಲ್ಲಾಡಳಿತ ಗಮನಹರಿಸಬೇಕಾದ ಅಗತ್ಯವಿದೆ ಎಂದು ಸ್ಥಳೀಯರು ಮಾಧ್ಯಮಗಳ ಮೂಲಕ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *