Breaking
23 Mar 2026, Mon

ಹುಣಸೂರು ನ್ಯಾಯಾಲಯಕ್ಕೆ ವರ್ಗಾವಣೆಗೊಂಡ ಶ್ರೀಮತಿ ಭಾಗ್ಯಮ್ಮಅವರಿಗೆ ಬೀಳ್ಕೊಡುಗೆ ಸಮಾರಂಭ

ಬಂಟ್ವಾಳ: ಹಿರಿಯ ಸಿವಿಲ್ ಮತ್ತು ಜೆ ಎಂ ಎಫ್ ಸಿ ನ್ಯಾಯಾಲಯ ಬಂಟ್ವಾಳ ಇಲ್ಲಿ ಕರ್ತವ್ಯ ನಿರ್ವಹಿಸಿದ ಭಾಗ್ಯಮ್ಮ ಇವರು ಹುಣಸೂರು ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿದ್ದು ಈ ನಿಟ್ಟಿನಲ್ಲಿ ಗೌರವಾಭಿನಂದನೆ ಮತ್ತು ಬೀಳ್ಕೊಡುಗೆ ಸಮಾರಂಭ ವಕೀಲರ ಸಂಘ (ರಿ), ಬಂಟ್ವಾಳ ದ ವತಿಯಿಂದ ಇಂದು ನಡೆಯಿತು.

ಶ್ರೀಮತಿ ಭಾಗ್ಯಮ್ಮ ಅವರು ಮೂರು ವರ್ಷಗಳ ಕಾಲ ಸಲ್ಲಿಸಿದ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು.

ಈ ವೇಳೆ ತನ್ನನ್ನು ಸನ್ಮಾನಿಸಿದ ಬಾರ್ ಅಸೋಸಿಯೇಷನ್ ಗೆ ಶ್ರೀಮತಿ ಭಾಗ್ಯಮ್ಮ ಧನ್ಯವಾದ ಸಲ್ಲಿಸಿದರು.

ವಕೀಲರ ಸಂಘ (ರಿ), ಬಂಟ್ವಾಳ ದ ಅಧ್ಯಕ್ಷರಾದ ರಿಚರ್ಡ್ ಕೋಸ್ತಾ ಎಂ ರವರು ನ್ಯಾಯಾಧೀಶೆ ಶ್ರೀಮತಿ ಭಾಗ್ಯಮ್ಮರ ಮುಂದಿನ ಜೀವನ ಸುಖಕರವಾಗಿರಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭ ವೇದಿಕೆಯಲ್ಲಿ ಹೆಚ್ಚುವರಿ ಸಿವಿಲ್ ಮತ್ತು ಜೆ ಎಂ ಎಫ್ ಸಿ ನ್ಯಾಯಾಧೀಶರಾದ ಕೃಷ್ಣಮೂರ್ತಿ ಎನ್., ಪ್ರದಾನ ಕಾರ್ಯದರ್ಶಿ ಕೆ. ನರೇಂದ್ರ ನಾಥ್ ಭಂಡಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಉಪಾಧ್ಯಕ್ಷರಾದ ದಯಾನಂದ ರೈ ಸ್ವಾಗತಿಸಿದರು, ಪ್ರಧಾನ ಕಾರ್ಯದರ್ಶಿ ಕೆ.ನರೇಂದ್ರ ಭಂಡಾರಿ ಧನ್ಯವಾದ ಸಮರ್ಪಿಸಿದರು, ಯುವ ವಕೀಲರಾದ ಸ್ವರ್ಣ ಗೌರಿ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮ ದಲ್ಲಿ ಹಿರಿಯ ಕಿರಿಯ ವಕೀಲ ಮಿತ್ರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *