Breaking
27 Jul 2026, Mon

ವಿಶ್ವ ಭಾರತೀ ಯಕ್ಷಸಂಭ್ರಮ–2026 ಸಮಾರೋಪ: ಗಣ್ಯರ ಉಪಸ್ಥಿತಿ, ಸಾಧಕರಿಗೆ ಸನ್ಮಾನ

ಬಂಟ್ವಾಳ: ತಾಲೂಕಿನ ಬಿಸಿರೋಡು ಸಮೀಪದ ತುಳು ಶಿವಳ್ಳಿ ಸಭಾಭವನದಲ್ಲಿ ವಿಶ್ವ ಭಾರತಿ ಯಕ್ಷ ಸಂಜೀವಿನಿ (ರಿ.) ಮುಡಿಪು ವತಿಯಿಂದ ಆಯೋಜಿಸಲಾದ “ವಿಶ್ವ ಭಾರತೀ ಯಕ್ಷಸಂಭ್ರಮ–2026” ಯಕ್ಷಗಾನ ತಾಳಮದ್ದಳೆ ಸಪ್ತಾಹದ ಸಮಾರೋಪ ಸಮಾರಂಭವು ಮಾಜಿ ಸಚಿವ ಬಿ. ರಮಾನಾಥ ರೈ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.


ಕಾರ್ಯಕ್ರಮದಲ್ಲಿ ಸಜೀಪ ಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್, ತುಳು ಶಿವಳ್ಳಿ ಸಭೆ ಬಂಟ್ವಾಳ ತಾಲೂಕು ಅಧ್ಯಕ್ಷ ರಾಜಾರಾಮ್ ಭಟ್, ಯಕ್ಷಗಾನ ಸಂಘಟಕ ಡಿ. ಭುಜಬಲಿ ಧರ್ಮಸ್ಥಳ, ಡಾ. ಶಿವಪ್ರಸಾದ ಶೆಟ್ಟಿ, ಸೋಮನಾಥ ಕಾರಂತ್ (ಬೆಂಗಳೂರು) ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದರು.


ಈ ಸಂದರ್ಭದಲ್ಲಿ ಶಿಕ್ಷಕ ಹಾಗೂ ಯಕ್ಷಗಾನ ಕಲಾವಿದ ಮಾಧವ ನಾವಡ–ದಂಪತಿವರ್ಕಾಡಿ ಮತ್ತು ಸಂಗೀತ ವಿದ್ವಾಂಸ ಡಾ. ಸೋಮಶೇಖರ ಮಯ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.


ಬಳಿಕ ಜಿಲ್ಲೆಯ ಪ್ರಸಿದ್ಧ ಯಕ್ಷಗಾನ ಕಲಾವಿದರ ಕೂಡುವಿಕೆಯೊಂದಿಗೆ ಪ್ರಶಾಂತ್ ಹೊಳ್ಳ ಅವರ ನೇತೃತ್ವದಲ್ಲಿ “ಅಂಗದ ಸಂಧಾನ” ಯಕ್ಷಗಾನ ತಾಳಮದ್ದಳೆ ಯಶಸ್ವಿಯಾಗಿ ನಡೆಯಿತು.

Leave a Reply

Your email address will not be published. Required fields are marked *