Breaking
27 Jul 2026, Mon

ಪಡುಬಿದ್ರಿಯಲ್ಲಿ ಕಂಟೈನರ್ ಲಾರಿಗೆ ಟೆಂಪೋ ಟ್ರಾವೆಲರ್ ಢಿಕ್ಕಿ – 15 ಮಂದಿಗೆ ಗಾಯ

ಪಡುಬಿದ್ರಿ: ಟೆಂಪೋ ಟ್ರಾವೆಲರ್ ವಾಹನವೊಂದು ಕಂಟೈನರ್ ಲಾರಿಗೆ ಹಿಂದಿನಿಂದ ಬಂದು ಢಿಕ್ಕಿ ಹೊಡೆದ ಘಟನೆ ಪಡುಬಿದ್ರಿ ಸಮೀಪದ ರಾಷ್ಟ್ರೀಯ ಹೆದ್ದಾರಿ 66ರ ಉಡುಪಿ ಮಂಗಳೂರು ಏಕಮುಖ ರಸ್ತೆಯಲ್ಲಿ ಇಂದು ನಡೆದಿದೆ.

ಘಟನೆಯಲ್ಲಿ ಟೆಂಪೋ ಟ್ರಾವೆಲರ್ ಜಖಂಗೊಂಡಿದ್ದು 15 ಮಂದಿಗೆ ಗಾಯವಾಗಿದೆ.

ಗಾಯಾಳುಗಳನ್ನು ಟಿಟಿ ಚಾಲಕ ಜಿತಿನ್ ಕೆ. ಪಿ. ಸಹಿತ ಬೇಬಿ ನಿಹಾಲ್ (3), ಮಾಸ್ಟರ್ ನಾವಿಕ್ (4), ಧನ್ವಿಷ್ (6), ಬೇಬಿ ಅಲಂಕೃತಾ (8) ಶೃತಿ (33), ರಮ್ಯಾ(43), ಐಶ್ವಯಾ (35), ಸುಮತಿ (54), ಮಾಳವಿಕಾ (28), ಶಾಂತಾ (56) ವಿನಿತ್ (33), ಶರತ್ (34), ಅಶ್ರಫ್ (51), ರಂಜಿತ್ (38), ವಿನೀಷ್(38) ಎಂದು ಗುರುತಿಸಲಾಗಿದೆ.

ತಕ್ಷಣವೇ ಗಾಯಾಳುಗಳನ್ನು ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು,ಚಿಕಿತ್ಸೆ ನೀಡಲಾಗಿದೆ.

Leave a Reply

Your email address will not be published. Required fields are marked *