ಬಂಟ್ವಾಳ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಎಂಬ ವಿಷಯವನ್ನು ಇಟ್ಟುಕೊಂಡು ವಿದ್ಯಾರ್ಥಿಗಳ ಹೆಸರಿನಲ್ಲಿ ರಾಷ್ಟ್ರ ವಿರೋಧಿ ವಿದ್ಯಾರ್ಥಿಗಳೊಂದಿಗೆ ನಕಲಿ ವಿದ್ಯಾರ್ಥಿಗಳನ್ನು ಎದುರುಗಡೆ ನಿಲ್ಲಿಸಿ ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆಯ ನೆಪದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿ ನಾಶ ಮಾಡಿರುವುದಲ್ಲದೇ, ಇಡೀ ಪೋಲಿಸ್ ವ್ಯವಸ್ಥೆಯನ್ನೇ ಬುಡಮೇಲು ಮಾಡಿಕೊಂಡು ಪೋಲಿಸರ ಮೇಲೆ ಹಲ್ಲೆ ಮಾಡುತ್ತಿರುವ ಘಟನೆಗಳಿಂದ ದೇಶದಲ್ಲಿನ ನೈಜ ರಾಷ್ಟ್ರ ಪ್ರೇಮಿ ವಿದ್ಯಾರ್ಥಿಗಳ ಗೌರವಕ್ಕೆ ಚ್ಯುತಿ ಬಂದಂತಾಗಿದ್ದು, ಇದೊಂದು ದೇಶದಲ್ಲಿನ ಶಾಂತಿಯನ್ನು ಕದಡಿಸಿ ಜನಸಾಮಾನ್ಯರಲ್ಲಿ ಅರಾಜಕತೆ ಸೃಷ್ಟಿಸುವ ದೊಡ್ಡ ಹುನ್ನಾರವಾಗಿದೆ.

ಭಾರತದ ರಾಷ್ಟ್ರೀಯ ಏಕತೆಗೆ ಧಕ್ಕೆ ತರುವ ರಾಷ್ಟ್ರ ವಿರೋಧಿಗಳ ಬಗ್ಗೆ ದೇಶದಲ್ಲಿನ ನೈಜ ಅಸಲಿ ವಿದ್ಯಾರ್ಥಿ ಯುವ ಸಮೂಹ ಎಚ್ಚೆತ್ತುಕೊಂಡು ಪ್ರತಿಭಟಿಸುವ ಅನಿವಾರ್ಯತೆ ಎದುರಾಗಿದೆ. ಈ ನಿಟ್ಟಿನಲ್ಲಿ ವಿವಿಧ ವಿದ್ಯಾರ್ಥಿ ಸಂಘಟನೆಗಳು ಮತ್ತು ವಿದ್ಯಾರ್ಥಿಗಳು ಜಾಗೃತರಾಗಬೇಕೆಂದು ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಸದಸ್ಯ ಪ್ರಭಾಕರ ಪ್ರಭು ಯುವ ವಿದ್ಯಾರ್ಥಿಗಳಿಗೆ ಪತ್ರಿಕಾ ಹೇಳಿಕೆ ಮೂಲಕ ವಿನಂತಿ ಮಾಡಿದ್ದಾರೆ.

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆಗಿನ ಪ್ರತಿಭಟನೆಯಲ್ಲಿ ನಿರತರಾದವರು ತ್ರಿವಳಿ ತಲಾಕ್ ನಿಷೇಧ ರದ್ದುಗೊಳಿಸಬೇಕು, ಎನ್ ಆರ್ ಸಿ ಮತ್ತು ಸಿ ಎ ಎ ಬಗ್ಗೆ ನ್ಯಾಯ ಸಿಗಬೇಕು, ನೋಟ್ ಬ್ಯಾನ್ ವಿರುದ್ಧ ಘೋಷಣೆ ಕೂಗುವುದರಿಂದ ಪ್ರತಿಭಟನೆಗಾರರ ಅಸಲಿ ಮುಖ ಕಳಚಿಗೊಂಡಿದೆ.

ಕಾಕ್ರೋಚ್ ಜನತಾ ಪಾರ್ಟ (ಸಿಪಿಜೆ) ಹಮ್ಮಿಕೊಂಡ ಈ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಪಕ್ಷವು ನೇರವಾಗಿ ದುಮುಕಿದ್ದು, ಪ್ರತಿಭಟನೆಯ ಇಡೀ ಸ್ವರೂಪವನ್ನು ಬದಲಾಯಿಸಿ ದೇಶದಲ್ಲಿನ ಜನರ ದಿಕ್ಕು ತಪ್ಪಿಸಲು ಪ್ರಯತ್ನಿಸುತ್ತಿರುವುದು ಖಂಡನೀಯ, ಇದನ್ನು ಅಸಲಿ ವಿದ್ಯಾರ್ಥಿಗಳು ಅರಿತು ಕೊಳ್ಳಬೇಕು.

ಈ ಪ್ರತಿಭಟನೆಯ ಹಿಂದೆ ಪರೋಕ್ಷವಾಗಿ ಭಾರತದ ಏಳಿಗೆಯನ್ನು ಮತ್ತು ಪ್ರಧಾನಿ ಮೋದಿಜೀಯವರ ಅಂತಾರಾಷ್ಟ್ರೀಯ ಜನಪ್ರೀಯತೆಯನ್ನು ಸಹಿಸಲು ಸಾಧ್ಯವಾಗದ ವಿದೇಶಿ ರಾಷ್ಟ್ರಗಳಲ್ಲಿನ ದೇಶದ್ರೋಹಿ ಕುತಂತ್ರಿಗಳ ಪಾತ್ರ ಎದ್ದು ಕಾಣುತ್ತಿರುವುದನ್ನು ದೇಶದ ರಾಷ್ಟ್ರಭಕ್ತ ವಿದ್ಯಾರ್ಥಿಗಳು ಅರ್ಥಮಾಡಿಕೊಂಡಿದ್ದಾರೆ.

ಜಿರಳೆಗಳು ರಾತ್ರಿ ಸಮಯದಲ್ಲಿ ಮಾತ್ರ ಸಂಚಾರಿಸಿ ಮನೆಯೊಳಗಿನ ತಿಂಡಿ ತಿನಿಸುಗಳನ್ನು ಹಾಳು ಮಾಡುತ್ತವೆ ಅದೇ ರೀತಿಯಲ್ಲಿ ಈ ಜಿರಳೆಗಳ ಪ್ರತಿಭಟನೆಗಳು ಸಹ ದೇಶದಲ್ಲಿನ ಶಾಂತಿಯನ್ನು ಕದಡಿಸಲು ಹೊಂಚು ಹಾಕುತ್ತಿವೆ.

ಆರ್ ಎಸ್ ಎಸ್ ಸಂಘಟನೆಗೆ ಹಣ ಎಲ್ಲಿಂದ ಬರುತ್ತೆ ಅಂತಾ ಕೇಳುವ ರಾಜಕಾರಣಿಗಳು ನಿನ್ನೆ ಮೊನ್ನೆ ಹುಟ್ಟಿದ ಕಾಕ್ರೋಚ್ ಪ್ರತಿಭಟನಾ ಭಯೋತ್ಪಾದಕರಿಗೆ ಹಣ ಎಲ್ಲಿಂದ ಬರುತ್ತೆ ಅಂತಾ ಯಾಕೆ ಕೇಳೋಲ್ಲ ಎಂಬುದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಈ ಎಲ್ಲಾ ಹಿನ್ನಲೆಯಲ್ಲಿ ನಕಲಿ ವಿದ್ಯಾರ್ಥಿಗಳ ಮತ್ತು ಜಿರಳೆಗಳ ಪ್ರತಿಭಟನೆಯನ್ನು ಅಸಲಿ ನೈಜ ವಿದ್ಯಾರ್ಥಿಗಳು ಬೆಕ್ಕುಗಳಂತೆ ಜಿರಳೆಗಳ ಅಟ್ಟಹಾಸವನ್ನು ಅಡಗಿಸಲು ವಿದ್ಯಾರ್ಥಿಗಳು ಎಚ್ಚೆತ್ತು ಕೊಳ್ಳಬೇಕು ಎಂದೂ ಪ್ರಭು ವಿದ್ಯಾರ್ಥಿಗಳಿಗೆ ಮನವಿ ಮಾಡಿದ್ದಾರೆ.


