Breaking
26 Jul 2026, Sun

ಬಿಲ್ಲವ ಸಮಾಜ ಸೇವಾ ಸಂಘ (ರಿ) ಕಲ್ಲಡ್ಕ ವಲಯ ಮಾಸಿಕ ಸಭೆ

ಕಲ್ಲಡ್ಕ: ಬಿಲ್ಲವ ಸಮಾಜ ಸೇವಾ ಸಂಘ (ರಿ), ಕಲ್ಲಡ್ಕ ವಲಯದ ಮಾಸಿಕ ಸಭೆಯು ಜುಲೈ 26 ರವಿವಾರ  ಪಂಚವಟಿ ವಾಣಿಜ್ಯ ಸಂಕೀರ್ಣ  ಕಲ್ಲಡ್ಕದಲ್ಲಿ ಸಂಘದ ಅಧ್ಯಕ್ಷ ಚಂದ್ರಶೇಖರ್ ಸಾಲಿಯನ್ ರವರ ಅಧ್ಯಕ್ಷತೆಯಲ್ಲಿ ಜರಗಿತು.

ಸಭೆಯಲ್ಲಿ ಕುಟುಂಬ ದಿನ ಕಾರ್ಯಕ್ರಮದ ಆಯೋಜನೆ ಕುರಿತು, ಹಾಗೂ ಸಂಘದ ವ್ಯಾಪ್ತಿಗೆ ಒಳಪಡುವ ಗ್ರಾಮಗಳಲ್ಲಿ ಮನೆ-ಮನೆ ಸಂಪರ್ಕ ಅಭಿಯಾನ ಕುರಿತು ಚರ್ಚಿಸಲಾಯಿತು.

 ಸಭೆಯ ವೇದಿಕೆಯಲ್ಲಿ ಸಂಘದ ನಿಕಟಪೂರ್ವ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ ಕೇಪುಳಕೋಡಿ, ಪ್ರಧಾನ ಕಾರ್ಯದರ್ಶಿ ರಮೇಶ್ ಪೂಜಾರಿ ಹೊಸಕಟ್ಟ, ಕೋಶಾಧಿಕಾರಿ ಕಿಶೋರ್ ಕುಮಾರ್ ಕಟ್ಟೆಮಾರು, ಮಹಿಳಾ ಸಮಿತಿಯ ಅಧ್ಯಕ್ಷೆ ಲಾವಣ್ಯ ಕುಂಟಿ ಪಾಪು, ಗೌರವ ಅಧ್ಯಕ್ಷ ಸುಧಾ ಸುಧೆಕಾರು,ಉಪಸ್ಥಿತರಿದ್ದರು.

 ಕಲ್ಲಡ್ಕ ವಲಯ ಬಿಲ್ಲವ ಸಮಾಜ ಸೇವಾ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು, ಮಹಿಳಾ ಕಾರ್ಯಕಾರಿಣಿ ಸಮಿತಿ ಸದಸ್ಯರು,ಎಲ್ಲಾ ಗ್ರಾಮ ಸಮಿತಿ ಅಧ್ಯಕ್ಷರು ಹಾಗೂ  ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *