Breaking
9 May 2026, Sat

ಹರೀಶ್ ಪೂಂಜಾ ವಿರುದ್ಧ ಕೋಮು ದ್ವೇಷದ ಭಾಷಣ ಆರೋಪ- ಜೂ.18ಕ್ಕೆ ವಿಚಾರಣೆ ಮುಂದೂಡಿಕೆ

ಬೆಳ್ತಂಗಡಿ: ಡೀಸೆಲ್ ಕದ್ದ, ಟ್ಯೂಬ್ ಲೈಟ್ ಹೊಡೆದ ಕಂಟ್ರಿ ಬ್ಯಾರಿಗಳು ಎಂದು ಬೆಳ್ತಂಗಡಿಯ ತೆಕ್ಕಾರು ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಪೂಂಜ ಅವರು ಹೇಳಿಕೆ ನೀಡಿದ್ದರು.

ಈ ವಿಚಾರಕ್ಕೆ ಸಂಬಂಧಪಟ್ಟಂತೆ ಶಾಸಕ ಹರೀಶ್ ಪೂಂಜ ಅವರು ಕೋಮು ದ್ವೇಷದ ಭಾಷಣ ಮಾಡಿದ್ದಾರೆ ಎಂದು ಎಫ್ ಐ ಆರ್ ಕೂಡ ದಾಖಲಾಗಿತ್ತು.ಈ ದೂರನ್ನು ಮತ್ತು ಕಾನೂನು ಪ್ರಕ್ರಿಯೆಯನ್ನು ರದ್ದುಗೊಳಿಸಬೇಕೆಂದು ಶಾಸಕರು ಪೂಂಜ ಹೈಕೋರ್ಟ್ ಮೊರೆ ಹೋಗಿದ್ದರು.

ಇದೀಗ ಅರ್ಜಿ ವಿಚಾರಣೆಗೆ ಬಂದಿದ್ದು, ಮುಂದಿನ ವಿಚಾರಣೆವರೆಗೆ ತಡೆಯಾಜ್ಞೆ ನೀಡಿ ವಿಚಾರಣೆಯನ್ನು ಮುಂದೂಡಿ ಜನಪ್ರತಿನಿಧಿ ನ್ಯಾಯಾಲಯ ಆದೇಶಿಸಿದೆ. ಜೂ.18ಕ್ಕೆ ವಿಚಾರಣೆ ಮುಂದೂಡಿದೆ.

ಹರೀಶ್ ಪೂಂಜರ ಪರವಾಗಿ ವಕೀಲರಾದ ಪ್ರಸನ್ನ ದೇಶಪಾಂಡೆ ಹಾಗೂ ರೋಹಿತ್ ಗೌಡ ವಾದಿಸಿದರು.

Leave a Reply

Your email address will not be published. Required fields are marked *