Breaking
27 Jul 2026, Mon

ರಸ್ತೆಗೆ ಮಗುಚಿ ಬಿದ್ದ ಗ್ಯಾಸ್‌ ಟ್ಯಾಂಕರ್‌: ಚಾಲಕನಿಗೆ ಗಂಭೀರ ಗಾಯ

ಉಪ್ಪಿನಂಗಡಿ: ಗ್ಯಾಸ್‌ ಟ್ಯಾಂಕರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಮಗುಚಿ ಬಿದ್ದ ಘಟನೆ ಶಿರಾಡಿ ಗ್ರಾಮದ ಕೊಡ್ಯಕಲ್ಲು ಎಂಬಲ್ಲಿ ಮೇ 21ರಂದು ನಡೆದಿದೆ.

ಪರಿಣಾಮ ಟ್ಯಾಂಕರ್‌ ಚಾಲಕ ಬಬ್ಲಿ ಯಾದವ್‌ ಎಂಬವರು ಗಂಭೀರವಾಗಿ ಗಾಯಗೊಂಡಿದ್ದು, ಸ್ಧಳೀಯ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯಿಂದ ಕೆಲಕಾಲ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗಿತ್ತು.

ಮಾಹಿತಿ ತಿಳಿದು ತಕ್ಷಣ ಸ್ಧಳಕ್ಕೆ ಆಗಮಿಸಿದ ಸಂಚಾರಿ ಪೊಲೀಸರು ಸ್ಧಳೀಯರ ಸಹಕಾರದಿಂದ ಟ್ಯಾಂಕರನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

Leave a Reply

Your email address will not be published. Required fields are marked *