ಧರ್ಮಸ್ಥಳ: ಪಂಜಾಬ್ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಏರೋಸ್ಪೇಸ್ ಇಂಜಿನಿಯರ್ ಆಗಿ ಡೆಲ್ಲಿಯಲ್ಲಿ ಉದ್ಯೋಗದಲ್ಲಿದ್ದ ಮೂಲದ ಆಕಾಂಕ್ಷಾ (22) ಅವರ ಅಂತ್ಯಸಂಸ್ಕಾರವು ಅವರ ಹುಟ್ಟೂರು ಧರ್ಮಸ್ಥಳ ಗ್ರಾಮದ ಬೋಳಿಯಾರ್ನಲ್ಲಿ ಇಂದು ನಡೆಯಿತು.
ಅಂತಿಮ ಸಂಸ್ಕಾರವು ಮಲಯಾಳಿ ಹಿಂದೂ ಸಂಪ್ರದಾಯದಂತೆ ನಡೆದರೂ ಕೂಡ ಅವರ ಸಾವಿನ ತನಿಖೆ ಅನುಕೂಲಕರವಾಗುವ ನಿಟ್ಟಿನಲ್ಲಿ ಪಾರ್ಥಿವ ಶರೀರವನ್ನು ದಹಿಸದೆ, ಬಾಕ್ಸ್ ನಲ್ಲಿಟ್ಟು ಮಣ್ಣು ಮಾಡುವ ಮೂಲಕ ಅಂತಿಮ ವಿಧಿವಿಧಾನಗಳನ್ನು ಪೂರೈಸಲಾಗಿದೆ.
ಇನ್ನು ಈ ಕುರಿತು ಕುಟುಂಬಸ್ಥರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು ಆಕಾಂಕ್ಷಾಳ ಸಾವಿಗೆ ನ್ಯಾಯ ಸಿಗಬೇಕು. ಮುಂದಿನ ತನಿಖಾ ಪ್ರಕ್ರಿಯೆಗಳಿಗೆ ಯಾವುದೇ ಅಡಚಣೆಯಾಗಬಾರದು ಮತ್ತು ಅಗತ್ಯಬಿದ್ದರೆ ಹೆಚ್ಚಿನ ಪರೀಕ್ಷೆಗಳಿಗೆ ಅನುಕೂಲವಾಗಲಿ ಎಂಬ ಕಾರಣದಿಂದ ನಾವು ಈ ನಿರ್ಧಾರಕ್ಕೆ ಬಂದಿದ್ದೇವೆ” ಎಂದು ತಿಳಿಸಿದ್ದಾರೆ.
ಸುರೇಂದ್ರ ನಾಯರ್ ಮತ್ತು ಸಿಂಧೂದೇವಿ ದಂಪತಿಗಳ ಪುತ್ರಿ ಆಕಾಂಕ್ಷ ಸಾವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು ತನಿಖೆ ಮುಂದುವರೆದಿದೆ. ಅಂತಿಮ ಕ್ರಿಯೆಯಲ್ಲಿ ಕುಟುಂಬಸ್ಥರು ಮತ್ತು ಆಪ್ತರು ಭಾಗವಹಿಸಿದ್ದರು



