ಬೆಂಗಳೂರು: ನಗರದ ಚಂದಾಪುರ ಎಸ್ಬಿಐ ಬ್ಯಾಂಕ್ನಲ್ಲಿ ಗ್ರಾಹಕನೊಂದಿಗೆ ಕನ್ನಡ ಮಾತನಾಡಲ್ಲ ಎಂದು ದುರಂಹಕಾರ ತೋರಿದ ಬ್ಯಾಂಕ್ ಮ್ಯಾನೇಜರ್ ಗೆ ವರ್ಗಾವಣೆಯ ಶಿಕ್ಷೆಯನ್ನು ನೀಡಲಾಗಿದೆ.
ಹಣ ಬಿಡಿಸಿಕೊಳ್ಳುವುದಕ್ಕೆ ಬ್ಯಾಂಕ್ ಗೆ ಆಗಮಿಸಿದ ಗ್ರಾಹಕನೊಂದಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವ್ಯವಸ್ಥಾಪಕಿ ಪ್ರಿಯಾಂಕ ಕನ್ನಡ ಮಾತನಾಡಲ್ಲ ಅಂತ ಉದ್ಧಟತನ ತೋರಿದ್ದರು.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಬಳಿಕ ಕನ್ನಡ ಪರ ಸಂಘಟನೆಗಳಿಂದ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

ಮಾತ್ರವಲ್ಲ ಕ್ಷಮೆಯಾಚನೆ ಮಾಡುವುದಕ್ಕೂ ಪಟ್ಟು ಹಿಡಿಯಲಾಗಿತ್ತು.
ತಕ್ಷಣ ಎಸ್ಬಿಐ ಪ್ರಾದೇಶಿಕ ಅಧಿಕಾರಿ ಹರೀಶ್ ಅವರು ಬ್ಯಾಂಕ್ಗೆ ಆಗಮಿಸಿ ಕ್ಷಮೆ ಕೇಳುವಂತೆ ಹೇಳಿದರು.
ಇದಕ್ಕೆ ಪ್ರಿಯಾಂಕಾ ಕ್ಷಮೆ ಕೇಳಿದ್ದಾರೆ. ಇನ್ನು ಮುಂದೆ ಈ ರೀತಿ ವರ್ತಿಸುವುದಿಲ್ಲ. ಕನ್ನಡ ಕಲಿಯಲು ಪ್ರಯತ್ನಿಸುತ್ತೇನೆ ಎಂದು ತಿಳಿಸಿದ್ದಾರೆ.

ಆದ್ರೆ ಇದೀಗ ಘಟನೆಯ ಮುಂದುವರಿದ ಭಾಗವಾಗಿ ಕನ್ನಡಪರ ಸಂಘಟನೆಗಳು ಎಸ್ಬಿಐ ಹೆಡ್ ಆಫೀಸ್ ಜನರಲ್ ಮ್ಯಾನೇಜರ್ ಸುಶೀಲ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದರು
.ಅವರ ಮನವಿಯನ್ನು ಸ್ವೀಕರಿಸಿದ ಅವರು ಬ್ಯಾಂಕ್ ಮ್ಯಾನೇಜರ್ ನನ್ನು ವರ್ಗಾವಣೆ ಮಾಡಿದ್ದಾರೆ



