Breaking
22 Mar 2026, Sun

ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಮಾಜಿ ಪ್ರಧಾನಿ ದಿ| ರಾಜೀವ ಗಾಂಧಿಯವರ ಪುಣ್ಯಸ್ಮರಣೆ

ಪುತ್ತೂರು : ದೇಶದ ಮಾಜಿ ಪ್ರಧಾನಿ ದಿ| ರಾಜೀವ ಗಾಂಧಿ ಯವರ ಪುಣ್ಯಸ್ಮರಣೆ ಕಾರ್ಯಕ್ರಮ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಕಾಂಗ್ರೆಸ್ ಅಧ್ಯಕ್ಷರು ಕೃಷ್ಣಪ್ರಸಾದ್ ಆಳ್ವ ರ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ವೇಳೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕೃಷ್ಣಪ್ರಸಾದ್ ಆಳ್ವರು ಅನಿವಾರ್ಯ ಸಂದರ್ಭದಲ್ಲಿ ದೇಶದ ಚುಕ್ಕಾಣಿ ಹಿಡಿದು ತನ್ನ ತಾಯಿ ದಿ| ಇಂದಿರಾಗಾಂಧಿಯವರನ್ನು ಅನುಸರಿಸಿ ದೇಶದ ಉದ್ದಗಲಕ್ಕೂ ಸಂಚರಿಸಿ ಜನರ ಸಮಸ್ಯೆಯನ್ನು ಅರಿತು ದೇಶದ ಅಭಿವೃದ್ಧಿ ಗೆ ಕಟಿಬದ್ದರಾಗಿದ್ದರು.

ಯುವ ಜನತೆ ದೇಶ ಕಟ್ಟುವಲ್ಲಿ ಪ್ರಮುಖರಾಗಬೇಕು ಎನ್ನುವ ಕಾರಣಕ್ಕೆ 18 ವರ್ಷ ತುಂಬಿದ ಯುವ ಜನತೆಗೆ ಮತದಾನದ ಹಕ್ಕು ನೀಡಿದರು.

ಭಾರತ ಇನ್ನಾವುದೇ ದೇಶಕ್ಕೆ ಕಡಿಮೆ ಇರಬಾರದು ಎನ್ನುವ ನಿಟ್ಟಿನಲ್ಲಿ ಕಂಪ್ಯೂಟರ್ ತಂತ್ರಜ್ಞಾನ ವನ್ನು ದೇಶಕ್ಕೆ ಪರಿಚಯಿಸಿದ ಕೀರ್ತಿ ಇವರದ್ದು.

ಭಯೋತ್ಪಾದನೆ ನಿಗ್ರಹ ಮಾಡುವ ಪ್ರಯತ್ನದಲ್ಲಿ ಎಲ್ ಟಿ ಟಿ ದಾಳಿಯಿಂದ ಹುತಾತ್ಮರಾದರು. ಇದು ದೇಶಕ್ಕೆ ಬಹುದೊಡ್ಡ ನಷ್ಟವಾಗಿ ಕಾಡಿದೆ.

ಇವರ ಅಭಿವೃದ್ಧಿ ಕಾರ್ಯಕ್ರಮಗಳು, ದೇಶದ ಭದ್ರತೆಯ ನಿಟ್ಟಿನಲ್ಲಿ ನಡೆಸಿ ಕೆಲಸಗಳು, ವಿದೇಶಿ ನೆಲದಲ್ಲಿ ನಮ್ಮ ದೇಶದ ಪರ ಪ್ರತಿಪಾದನೆಯಂತಹ ಕೆಲಸ ಕಾರ್ಯಕ್ರಮಗಳನ್ನು ಈ ಸಂದರ್ಭದಲ್ಲಿ ನೆಪಿಸಿಕೊಳ್ಳಬೇಕು ಎಂದರು.

ಈ ಸಂದರ್ಭ ಬ್ಲಾಕ್ ಪ್ರಧಾನ ಕಾರ್ಯದರ್ಶಿ ರವಿಪ್ರಸಾದ್ ಶೆಟ್ಟಿ ಬನ್ನೂರು, ಪೂರ್ಣೇಶ್ ಭಂಡಾರಿ, ಶರೋನ್ ಸೀಕ್ವೇರಾ, ಸಂಘಟನಾ ಕಾರ್ಯದರ್ಶಿಗಳಾದ ಸಂತೋಷ್ ಭಂಡಾರಿ, ಸಲಾಂ ಸಂಪ್ಯ, ಹಾರಿಸ್ ಸಂಪ್ಯ, ಹಕೀಂ ಬೊಳ್ವಾರ್, ನಾಮನಿರ್ದೇಶನ ಸದಸ್ಯರು ಶರೀಫ್ ಬಲ್ನಾಡ್, ಅಬ್ದುಲ್ ರಹಿಮಾನ್ ಒಳತ್ತಡ್ಕ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *