Breaking
22 Mar 2026, Sun

ಲಾಯಿಲ: ಸೋಮಾವತಿ ನದಿಯಲ್ಲಿ ವಾಮಾಚಾರ ನಡೆದ ಶಂಕೆ : ಸ್ಥಳೀಯ ವ್ಯಕ್ತಿಯಿಂದ ಸ್ಪಷ್ಟನೆ

ಬೆಳ್ತಂಗಡಿ: ತಾಲೂಕಿನ ಲಾಯಿಲ ಗ್ರಾಮದ ಬಜಕ್ರೆಸಾಲು ಸೋಮಾವತಿ ನದಿಯ ನೀರಿನಲ್ಲಿ ಬಾಳೆ ಎಲೆ, ಹೂ ಸಹಿತ ಕೆಲವೊಂದು ಪೂಜೆಗೆ ಬಳಸಿದ ವಸ್ತುಗಳು ಕಂಡು ಬಂದಿದ್ದು, ಇದರ ಪೋಟೊ ವೈರಲ್ ಆಗಿ ಬಜಕ್ರೆಸಾಲು ಬಳಿ ವಾಮಚಾರ ನಡೆದಿದೆ ಎಂಬ ಸುದ್ದಿ ಹರಡಲಾಗಿತ್ತು. ಇದಕ್ಕೆ ಸ್ಥಳೀಯರೊಬ್ಬರು ಸ್ಪಷ್ಟನೆ ನೀಡಿದ್ಧಾರೆ.

ಸ್ಥಳೀಯ ಮನೆಯವರು ಪ್ರಶ್ನಾಚಿಂತನೆಯಲ್ಲಿ ಕಂಡು ಬಂದಂತೆ ದೋಷ ಪರಿಹಾರಕ್ಕಾಗಿ ಮಾಡಿದ ಪೂಜೆಯ ವಸ್ತುಗಳಾಗಿದ್ದು ಇದಾಗಿದ್ದು ಇದನ್ನೇ ತಪ್ಪಾಗಿ ಬಿಂಬಿಸಿ, ಪೋಟೊ ತೆಗೆದು ವಾಮಾಚಾರದ ಸುದ್ದಿ ಹರಡಲಾಗಿದೆ.

ಇಲ್ಲಿ ಯಾವುದೇ ವಾಮಾಚಾರ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಇಂತಹ ಸೂಕ್ಷ್ಮ ವಿಷಯಗಳನ್ನು ಸರಿಯಾಗಿ ಪರಿಶೀಲಿಸದೆ ವೈರಲ್ ಮಾಡಬಾರದು, ಇದರಿಂದ ಜನರು ಭಯಭೀತರಾಗಿ ಆತಂಕಕ್ಕೊಳಗಾಗುತ್ತಾರೆ. ಒಂದು ವೇಳೆ ಗಮನಕ್ಕೆ ಬಂದರೂ ಪಂಚಾಯತ್, ಅಥವಾ ಸ್ಥಳೀಯ ಜನಪ್ರತಿನಿಧಿಗಳ, ಪೊಲೀಸರ ಗಮನಕ್ಕೆ ತರುವಂತೆ ವಿನಂತಿಸಿದ್ದಾರೆ.

Leave a Reply

Your email address will not be published. Required fields are marked *