ಕುಂದಾಪುರ: ಕೌಟುಂಬಿಕ ಕಲಹದಿಂದ ಬೇಸತ್ತ ಯುವಕನೊಬ್ಬ ಆತ್ಮಹತ್ಯೆ ಮಾಡುವುದಕ್ಕೆಂದು ಬಾವಿಗೆ ಹಾರಿದ್ದು, ಅಗ್ನಿಶಾಮಕದಳದ ಸಿಬ್ಬಂದಿಗಳು ರಕ್ಷಣೆ ಮಾಡಿರುವ ಘಟನೆ ಕುಂದಾಪುರದ ಆನೆಗುಡ್ಡೆ ಕುಂಬಾಶಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ.
ಚೇತನ್( 23 ವರ್ಷ) ಪ್ರಾಣಾಪಾಯದಿಂದ ಪಾರಾದ ಯುವಕನಾಗಿದ್ದಾನೆ.
ಮೇ.18 ರಂದು ಮನೆಯಲ್ಲಿ ನಡೆದ ಜಗಳದಿಂದ ಬೇಸತ್ತ ಹೋಗಿದ್ದ ಈತ ರಾತ್ರಿ ಸುಮಾರು 9.55ರ ವೇಳೆಗೆ ಮನೆಯ ಸಮೀಪದ ಬಾವಿಗೆ ಹಾರಿದ್ದಾನೆ.

ಈ ವೇಳೆ ಯುವಕ ಜೀವ ಭಯದಿಂದ ಕಾಪಾಡಿ..ಕಾಪಾಡಿ ಎಂದು ಜೋರಾಗಿ ಬೊಬ್ಬೆ ಹೊಡೆದಿದ್ದಾನೆ.
ಬಳಿಕ ಅಲ್ಲಿ ಸೇರಿದ ಜನ ಕುಂದಾಪುರದ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಯುವಕನನ್ನು ರಕ್ಷಣೆ ಮಾಡಿದ್ದಾರೆ.

ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಸಿಬ್ಬಂದಿಗಳಾದ ಸುಂದರ್ ಬನ್ನಾಜೆ, ವಿ. ಸುಂದರ್, ಖಾಜಾ ಹುಸೇನ್, ಡ್ರೈವರ್ ಸಚಿನ್, ರಿಯಾಜ್ ಪಾಲ್ಗೊಂಡಿದ್ದರು.
ಸದ್ಯ ಈ ಕಾರ್ಯಾಚರಣೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
