ಬಂಟ್ವಾಳ : ಕರ್ನಾಟಕ ಯಕ್ಷಗಾನ ಅಕಾಡೆಮಿಯು ಜುಲೈ 27, ರವಿವಾರ, ಸಂಜೆ ಗಂಟೆ 4 ರಿಂದ ಬಿ.ಸಿ.ರೋಡಿನ ತುಳು ಶಿವಳ್ಳಿ ಸಭಾಭವನದಲ್ಲಿ ಖ್ಯಾತ ಕಲಾವಿದರ ಕೂಡುವಿಕೆಯಿಂದ ‘ಗದಾಯುದ್ಧ’ ಪ್ರಸಂಗದ ತಾಳಮದ್ದಳೆಯನ್ನು ಏರ್ಪಡಿಸಿದೆ.

ಈ ಸಂದರ್ಭದಲ್ಲಿ ತೆಂಕುತಿಟ್ಟಿನ ಭಾಗವತ ಕೀರ್ತಿಶೇಷ ಕುಬಣೂರು ಶ್ರೀಧರ ರಾವ್ ಅವರ ಸ್ಮೃತಿಯೂ ಸಂಪನ್ನವಾಗಲಿದೆ. ವಿಶ್ವಭಾರತಿ ಯಕ್ಷ ಸಂಜೀವಿನಿ ಟ್ರಸ್ಟ್ (ರಿ) ಮುಡಿಪು ಕಾರ್ಯಕ್ರಮವನ್ನು ಸಂಘಟಿಸಿದೆ.
ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಅಧ್ಯಕ್ಷರಾದ ಡಾ.ತಲ್ಲೂರು ಶಿವರಾಮ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಸಮಾರಂಭ ನಡೆಯಲಿದೆ. ಹಿರಿಯ ಅರ್ಥದಾರಿ ಶ್ರೀ ಜಬ್ಬಾರ್ ಸಮೋ ಅವರು ಕೀರ್ತಿಶೇಷ ಕುಬಣೂರು ಶ್ರೀಧರ ರಾವ್ ಅವರ ಸ್ಮತಿಯನ್ನು ಮಾಡಲಿದ್ದಾರೆ.

ಕರ್ನಾಟಕ ಸರಕಾರದ ಮಾಜಿ ಸಚಿವ ಶ್ರೀ ರಮಾನಾಥ ರೈ, ಕರ್ನಾಟಕ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ. ಟಿ. ಶ್ಯಾಮ ಭಟ್, ಮಂಗಳೂರಿನ ಮಾಂಡವಿ ಮೋಟಾರ್ಸ್ ಲಿ., ಇದರ ಸೇಲ್ಸ್ ಡಿ.ಜಿ.ಎಂ. ಶ್ರೀ ಶಶಿಧರ ಕಾರಂತ, ಯಕ್ಷಗಾನ ಸಂಘಟಕ ಶ್ರೀ ಭುಜಬಲಿ ಧರ್ಮಸ್ಥಳ, ಸಜಿಪ ಶ್ರೀ ಷಣ್ಮುಖ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಶ್ರೀ ಮುಳ್ಳಂಜ ವೆಂಕಟೇಶ್ವರ ಭಟ್, ಯಕ್ಷಗಾನ ಮಹಾಪೋಷಕರಾದ ಶ್ರೀ ಅರವಿಂದ ಹೊಳ್ಯ ಬೆಂಗಳೂರು, ಯಕ್ಷಗಾನ ಅಕಾಡೆಮಿಯ ಸದಸ್ಯ ಶ್ರೀ ಕೃಷ್ಣಪ್ಪ ಕಿನ್ಯ, ಮತ್ತೊರ್ವ ಸದಸ್ಯ ಶ್ರೀ ಗುರುರಾಜ್ ಭಟ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಜರಗುವ ತಾಳಮದ್ದಳೆಯಲ್ಲಿ ಕಲಾವಿದರಾಗಿ ಶ್ರೀಗಳಾದ -ಗಿರೀಶ್ ರೈ ಕಕ್ಕೆಪದವು, ಜನಾರ್ದನ ತೋಳ್ವಾಡಿತ್ತಾಯ, ಸೀತಾರಾಮ ತೋಳ್ವಾಡಿತ್ತಾಯ (ಹಿಮ್ಮೇಳ), ಕೆ. ಗೋವಿಂದ ಭಟ್, ಸುಣ್ಣಂಬಳ ವಿಶ್ವೇಶ್ವರ ಭಟ್, ಜಬ್ಬಾರ್ ಸಮೋ, ಗುಂಡ್ಯಡ್ಕ ಈಶ್ವರ ಭಟ್, ಪ್ರಶಾಂತ ಹೊಳ್ಳ, ಭಾಸ್ಕರ ರೈ ಕುಕ್ಕುವಳ್ಳಿ, ಉದಯ ವೆಂಕಟೇಶ ಭಟ್, ರವಿರಾಜ್ ಶೆಟ್ಟಿ ಪೆರುವಾಯಿ, ಕು ಕುಶಲ ಮುಡಿಪು (ಅರ್ಥದಾರಿಗಳು) ಭಾಗವಹಿಸುತ್ತಾರೆ.

ಈ ಸಮಾರಂಭಕ್ಕೆ ಸಾರ್ವಜನಿಕರಿಗೆ ಮುಕ್ತ ಪ್ರವೇಶ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


