Breaking
15 Jul 2026, Wed

ಗೃಹರಕ್ಷಕದಳದ ನಿವೃತ್ತ ಸಿಬ್ಬಂದಿ ಬೋಜ ಬಂಟ್ವಾಳ ಸಿವಿಲ್ ಡಿಫೆನ್ಸ್ ವಿಭಾಗಕ್ಕೆ ಆಯ್ಕೆ

ಬಂಟ್ವಾಳ: ಕಳೆದ ಮೂರು ದಶಕಗಳ ಕಾಲ ಗೃಹರಕ್ಷಕದಳದಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಬೋಜ ಬಂಟ್ವಾಳ ಅವರು, ನಿವೃತ್ತಿಯ ಬಳಿಕವೂ ತಮ್ಮ ಸೇವಾ ಮನೋಭಾವವನ್ನು ಮುಂದುವರಿಸಿದ್ದಾರೆ.


ಪ್ರಸ್ತುತ ಅವರು ಗೃಹರಕ್ಷಕದಳದ ಸಿವಿಲ್ ಡಿಫೆನ್ಸ್ ವಿಭಾಗಕ್ಕೆ ಆಯ್ಕೆಯಾಗಿದ್ದು, ಅವರ ಸೇವಾ ನಿಷ್ಠೆಗೆ ಮತ್ತೊಂದು ಮನ್ನಣೆ ದೊರೆತಿದೆ.


ಬೋಜ ಬಂಟ್ವಾಳ ಅವರು ಗೃಹರಕ್ಷಕದಳದ ಸೇವೆಯೊಂದಿಗೆ ವಿದ್ಯುತ್ ಗುತ್ತಿಗೆದಾರರಾಗಿಯೂ ಕಾರ್ಯನಿರ್ವಹಿಸಿ ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ.

Leave a Reply

Your email address will not be published. Required fields are marked *