Breaking
22 Mar 2026, Sun

ಭಯೋತ್ಪಾದನೆಯ ಬೆಂಬಲಿಗರು ಅಮೆರಿಕ ಅಧ್ಯಕ್ಷ ಟ್ರಂಪ್ ನ ಸಲಹೆಗಾರರು

ನವದೆಹಲಿ: ಭಯೋತ್ಪಾದನೆ ವಿರುದ್ಧ ದೊಡ್ಡ ದೊಡ್ಡ ಮಾತುಗಳನ್ನು ಆಡುವ ಅಮೆರಿಕ ಅಧ್ಯಕ್ಷ ಟ್ರಂಪ್, ಇದೀಗ ಉಗ್ರವಾದದ ಹಿನ್ನೆಲೆಯುಳ್ಳ ವ್ಯಕ್ತಿಗಳನ್ನೇ ಧಾರ್ಮಿಕ ವಿಷಯದಲ್ಲಿ ತಮ್ಮ ಸಲಹೆಗಾರರನ್ನಾಗಿ ನೇಮಕ ಮಾಡಿಕೊಂಡಿದ್ದಾರೆ.

ಉಗ್ರವಾದಕ್ಕೆ ನಂಟ ಇರುವ ಇಸ್ಮಾಯಿಲ್ ಮತ್ತು ಹಮ್ಜಾ ಎಂಬವರನ್ನು ಟ್ರಂಪ್ ಧಾರ್ಮಿಕ ವಿಷಯದಲ್ಲಿ ತಮ್ಮ ಸಲಹೆಗಾರರನ್ನಾಗಿ ನೇಮಕ ಮಾಡಿರುವುದು ರಾಜತಾಂತ್ರಿಕ ಮತ್ತು ಭದ್ರತಾ ವಲಯದಲ್ಲಿ ಭಾರೀ ಆತಂಕಕ್ಕೆ ಕಾರಣವಾಗಿದೆ.

ಶ್ವೇತಭವನದ ಧಾರ್ಮಿಕ ಸಲಹಾ ಮಂಡಳಿಗೆ ಲಷ್ಕರ್, ಹಮಾಸ್, ತಾಲಿಬಾನ್, ಅಲ್ಖೈದಾ ಮುಸ್ಲಿಂ ಬ್ರದರ್ಹುಡ್ ನಂಟಿನ ಇಸ್ಮಾಯಿಲ್ ರೋಯರ್ ಮತ್ತು ಜಿಹಾದಿ ಸಿದ್ಧಾಂತ ಪ್ರತಿಪಾದಿಸುವ ಶ್ಯಾಕ್ ಹಮ್ಜಾ ಯೂಸುಫ್ರನ್ನು ನೇಮಕ ಮಾಡಲಾಗಿದೆ.

ಇನ್ನು ಅದರಲ್ಲಿ ಇಸ್ಮಾಯಿಲ್ ರೋಯರ್ ಎಂಬಾತ 2000ರಲ್ಲಿ ಪಾಕಿಸ್ತಾನದಲ್ಲಿ ಲಷ್ಕರ್ ಉಗ್ರ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದ. ಅಲ್ಲದೆ ಭಾರತೀಯ ಭದ್ರತಾ ಕೇಂದ್ರದ ಮೇಲೆ ದಾಳಿ ಸೇರಿ ಕಾಶ್ಮೀರದಲ್ಲಿನ ಉಗ್ರ ಚಟುವಟಿಕೆಗಳಲ್ಲಿ ಭಾಗವಹಿಸಿದ್ದ. ಇದಕ್ಕಾಗಿ 2004ರಲ್ಲಿ ಅಮೆರಿಕ ನ್ಯಾಯಾಲಯ ವಿಧಿಸಿದ ಶಿಕ್ಷೆಯಲ್ಲಿ ಈತ 13 ವರ್ಷ ಜೈಲು ಅನುಭವಿಸಿದ್ದ.

ಇತ್ತ ಹಮ್ಜಾ ಜಿಹಾದಿ ಸಿದ್ಧಾಂತದ ಪ್ರತಿಪಾದಕನಾಗಿದ್ದು ಕ್ಯಾಲಿಫೋರ್ನಿಯಾದಲ್ಲಿ ಝೈತುನಾ ಕಾಲೇಜಿನ ಸಹ ಸಂಸ್ಥಾಪಕನಾಗಿದ್ದಾನೆ. ಈತ ಪ್ರಚೋದನಾಕಾರಿ ಭಾಷಣಗಳ ಮೂಲಕ ಉಗ್ರವಾದಿಗಳಿಗೆ ಉಗ್ರ ಕೃತ್ಯಗಳಲ್ಲಿ ಭಾಗಿಯಾಗಲು ಪ್ರೇರೇಪಿಸಿದ ಆರೋಪ ಹೊತ್ತಿರುವ ವ್ಯಕ್ತಿಯಾಗಿದ್ದಾನೆ.

Leave a Reply

Your email address will not be published. Required fields are marked *