Breaking
20 Sep 2026, Sun

ಲಾರಿ ಹರಿದು ಮುಲ್ಕಿ ಕಾಲೇಜ್ ವಿದ್ಯಾರ್ಥಿ ಮೃತ್ಯು

ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಹಳೆಯಂಗಡಿ ಪೇಟೆಯಲ್ಲಿ ಬೈಕ್ ಸಹ ಸವಾರನ ಮೇಲೆ ಲಾರಿ ಹರಿದು ಸಹಸವಾರ ಮೃತಪಟ್ಟಿರುವ ಘಟನೆ ನಡೆದಿದೆ.

ಮೃತರನ್ನು ಕೇರಳ ತಿರುವನಂತಪುರ ಮೂಲದ ಮುಲ್ಕಿ ಸೈಂಟ್ ಆನ್ಸ್ ಕಾಲೇಜು ವಿದ್ಯಾರ್ಥಿ ಸುಗಂಧ್ (21) ಎಂದು ಗುರುತಿಸಲಾಗಿದೆ.

ಸುಗಂಧ್ ಹಾಗೂ ಬೈಕ್‌ ಸವಾರ ಇನ್ಸಾಫ್ (21) ಸುರತ್ಕಲ್ ನಿಂದ ಮೂಲ್ಕಿ ಕಡೆಗೆ ಪ್ರಯಾಣಿಸುತ್ತಿದ್ದ ವೇಳೆ ಮಂಗಳೂರಿನಿಂದ ಉಡುಪಿ ಕಡೆಗೆ ಚಲಿಸುತ್ತಿರುವ ಲಾರಿ ಹಳೆಯಂಗಡಿ ಮುಖ್ಯ ರಸ್ತೆಯ ಬ್ಯಾರಿಕೇಡ್ ಬಳಿ ಸಿಕ್ಕಿಹಾಕಿಕೊಂಡು ಅಫಘಾತ ಸಂಭವಿಸಿದೆ. ಈ ವೇಳೆ ಲಾರಿ ಸಹ ಸವಾರ ಸುಗಂಧ್ ಮೇಲೆ ಹರಿದಿದೆ.
ಬೈಕ್ ಸವಾರ ಇನ್ಸಾಫ್ (21) ಸಣ್ಣಪುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಘಟನೆ ಸಂಬಂಧ ಲಾರಿ ಚಾಲಕ ಮಂಜುನಾಥ ಚೂರಿ ವಿರುದ್ದ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *