ಧರ್ಮಸ್ಥಳ: ಪಂಜಾಬ್ನಲ್ಲಿ ಸಾವನ್ನಪ್ಪಿರುವ ಧರ್ಮಸ್ಥಳ ಗ್ರಾಮದ ಬೊಳಿಯಾರ್ ನಿವಾಸಿಯಾಗಿರುವ ಏರೋಸ್ಪೇಸ್ ಉದ್ಯೋಗಿ (22 ) ಸಾವಿಗೆ ಬಿಗ್ ಟ್ವಸ್ಟ್ ಸಿಕ್ಕಿದೆ.
ಈಕೆಯ ಸಾವಿಗೆ ಪ್ರೇಮ ವೈಫಲ್ಯವೇ ಕಾರಣವಾಗಿರುವ ಸಾಧ್ಯತೆಯ ಮಾಹಿತಿ ಪ್ರಾಥಮಿಕ ತನಿಖೆಯ ವರದಿಯಲ್ಲಿ ಬಯಲಾಗಿದೆ.
ಆಕಾಂಕ್ಷ ಪಂಜಾಬ್ ನ ಪಗ್ವಾಡ ಕಾಲೇಜಿನ ಪ್ರೊ.ಮ್ಯಾಥ್ಯೂ ಅವರನ್ನು ಪ್ರೀತಿಸುತ್ತಿದ್ದರು. ಪ್ರೀತಿ ಯಾವುದೋ ಒಂದು ಕಾರಣಕ್ಕೆ ಮುರಿದು ಬಿದ್ದಿದೆ ಅಂತ ಹೇಳಲಾಗುತ್ತಿದೆ.


ಇದೇ ಕಾರಣಕ್ಕೆ ಈಕೆ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ.ಕಾಲೇಜಿಗೆ ಸರ್ಟಿಫಿಕೇಟ್ ತರಲೆಂದು ಹೋದಾಗ ಈ ವಿಚಾರಕ್ಕೆ ಫ್ರೊ.ಮ್ಯಾಥ್ಯೂ ಜೊತೆ ಆಕಾಂಕ್ಷ ಗಲಾಟೆ ಮಾಡಿದ್ದು, ನಂತರ ಮನನೊಂದು ಕಾಲೇಜಿನ ಕಟ್ಟಡದಿಂದ ಜಿಗಿದು ಸೂಸೈಡ್ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಸದ್ಯಕ್ಕೆ ಪೊಲೀಸರು ಪ್ರೊ.ಮ್ಯಾಥ್ಯೂ ಅವರನ್ನು ವಿಚಾರಣೆ ಮಾಡುತ್ತಿದ್ದು, ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.ಇನ್ನು ಕೆಲವು ಮೂಲಗಳ ಮಾಹಿತಿ ಪ್ರಕಾರ ಕೇರಳದ ಕೊಟ್ಟಾಯಂ ಮೂಲದ ಲೆಕ್ಚರರ್ ಬಿಜಿಲ್ ಮ್ಯಾಥ್ಯೂ ಎಂಬಾತ ಆಕಾಂಕ್ಷಗೆ ತನ್ನ ವಿಭಾಗದ ಸರ್ಟಿಫಿಕೇಟ್ ನೀಡಲು ಸತಾಯಿಸುತ್ತಿದ್ದ ಎನ್ನಲಾಗಿದೆ.


ಅಲ್ಲದೇ ಈತನಿಗೆ ಆಕಾಂಕ್ಷನ ಮೇಲೆ ಪ್ರೇಮಾಂಕುರವಾಗಿದ್ದು, ಇದೇ ಕಾರಣಕ್ಕಾಗಿ ಆತ ಸರ್ಟಿಫಿಕೇಟ್ ನೀಡಲು ಸತಾಯಿಸುತ್ತಿದ್ದುದಾಗಿ ತಿಳಿದುಬಂದಿದೆ. ಸರ್ಟಿಫಿಕೇಟ್ ಪಡೆಯಲು ಹೋದ ದಿವಸ ಆತ ಕಾಲೇಜಿಗೆ ಬರದ ಹಿನ್ನಲೆಯಲ್ಲಿ ಅವರಿಬ್ಬರ ನಡುವೆ ವಾಟ್ಸಾಪ್ ನಲ್ಲಿ ಚಾಟಿಂಗ್ ನಡೆದಿದೆ. ನನಗೆ ಸಿಕ್ಕಾಪಟ್ಟೆ ಟಾರ್ಚರ್ ಮಾಡಬೇಡ, ದಯವಿಟ್ಟು ಬಂದು ಸರ್ಟಿಫಿಕೇಟ್ ಕೊಡು, ಇಲ್ಲದಿದ್ದರೆ ಜಂಪ್ ಮಾಡಿ ಸಾಯುತ್ತೇನೆ ಅಂತ ಚಾಟಿಂಗ್ ಮಾಡಿರುವ ಮೆಸೇಜ್ ಕೂಡ ಪೊಲೀಸರಿಗೆ ಲಭ್ಯವಾಗಿದ್ದು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಆರೋಪಿ ಸ್ಥಾನದಲ್ಲಿರುವ .ಮ್ಯಾಥ್ಯೂ ಹೆಂಡತಿ ಮತ್ತು ಪುಟ್ಟ ಮಕ್ಕಳಿಬ್ಬರು ಪೊಲೀಸ್ ಠಾಣೆಗೆ ಆಗಮಿಸಿ ಆಕಾಂಕ್ಷ ಹೆತ್ತವರಲ್ಲಿ ಕೇಸ್ ನೀಡದಂತೆ ಮನವಿ ಮಾಡಿದ್ದಾರೆ. ಅಲ್ಲದೇ, ಆಕಾಂಕ್ಷ ಹಾಗೂ ಫ್ರೊ.ಮ್ಯಾಥ್ಯೂ ಹೆಂಡತಿ ನಡುವೆಯೂ ಚಾಟಿಂಗ್ ನಡೆದಿದೆ ಅಂತ ಹೇಳಲಾಗುತ್ತದೆ.ಅದೇನು ಎಂಬುದು ಕೂಡ ಇನ್ನಷ್ಟೇ ಪೊಲೀಸರು ರಿವೀಲ್ ಮಾಡಬೇಕಾಗಿದೆ.
ಮೇ. 21ರಂದು ಆಕ್ಷಾಂಕಗಳ ಪಾರ್ಥೀವ ಶರೀರ ತವರಿಗೆ ಬರಲಿದ್ದು ಅಂದೇ ಅಂತ್ರಕ್ರಿಯೆ ನಡೆಯಲಿದೆ ಎಂದು ಆಕೆಯ ಕುಟುಂಬ ಮೂಲಗಳು ಮಾಹಿತಿ ನೀಡಿವೆ. ಪಂಜಾಬ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.


