ಬಂಟ್ವಾಳ: ಪುತ್ತೂರು ಕಬಕದಲ್ಲಿ ಮೇ.11 ರಂದು ಸರಕಾರಿ ಬಸ್ ಚಾಲಕನ ಬೇಜವಾಬ್ದಾರಿಯಿಂದ ಅಪಘಾತದಲ್ಲಿ ಮರಣ ಹೊಂದಿದ ದಿವಂಗತ ಅರುಣ್ ಕುಲಾಲ್ ಬೋರುಗುಡ್ಡೆಯವರ ಮನೆಗೆ ಬಂಟ್ವಾಳ ತಾಲೂಕಿನ ಶಾಸಕ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಭೇಟಿ ನೀಡಿದರು.
ಈ ವೇಳೆ ಮೃತರ ಪತ್ನಿ,ಮಗ, ತಾಯಿಗೆ ಸಾಂತ್ವನ ಹೇಳಿದ ಅವರು ಅರುಣ್ ಬೊರು ಗುಡ್ಡೆಯವರ ಮಗನ ಮುಂದಿನ ವಿದ್ಯಾಭ್ಯಾಸದ ಸಂಪೂರ್ಣ ಖರ್ಚನ್ನು ತಾನು ಭರಿಸುವುದಾಗಿ ತಿಳಿಸಿದರು.

ಮತ್ತು ಅಪಘಾತದಿಂದ ಸಿಗುವ ಪರಿಹಾರ ಧನವನ್ನು ಆದಷ್ಟು ಬೇಗ ನೀಡುವಂತೆ ಸಂಬಂಧಪಟ್ಟ ಇಲಾಖೆಗೆ ಮನವಿ ಮಾಡಿದರು. ಈ ಸಂದರ್ಭ ಪಕ್ಷದ ಪ್ರಮುಖರು,ಸದಸ್ಯರು ಶಾಸಕರಿಗೆ ಸಾಥ್ ನೀಡಿದರು.


ಘಟನೆ
ಮೇ. 11 ರಂದು ಪುತ್ತೂರಿನ ಕಬಕದಲ್ಲಿ ಕೆ.ಎಸ್.ಆರ್.ಟಿ ಸಿ ಮತ್ತು ದ್ವಿಚಕ್ರ ನಡುವೆ ನಡೆದ ರಸ್ತೆ ಅಪಘಾತದಲ್ಲಿ ಚಾಲಕನ ಓವರ್ ಟೇಕ್ ಧಾವಂತದಿಂದ ಬೈಕ್ನಲ್ಲಿ ಸಂಚರಿಸುತ್ತಿದ್ದ ಬೈಕ್ ಸವಾರ ಅರುಣ್ ಬೋರುಗುಡ್ಡೆ(45) ಮತ್ತು ಅವರ ಮಗ ಧ್ಯಾನ್(15) ಉಸಿರು ಚೆಲ್ಲಿದ್ದಾರೆ.

ಅರುಣ್ ಅವರು ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ನಿವಾಸಿಯಾಗಿದ್ದು, ಗ್ರಾಮ ಪಂಚಾಯತ್ ಸದಸ್ಯರೂ ಕೂಡ ಆಗಿದ್ದರು. ವೃತ್ತಿಯಲ್ಲಿ ಕಾರ್ಪೆಂಟರ್ ಆಗಿದ್ದ ಅವರ ಸಾವಿನಿಂದ ಕುಟುಂಬಕ್ಕೆ ದಿಕ್ಕೇ ತೋಚದ ಪರಿಸ್ಥಿತಿ ನಿರ್ಮಾಣವಾಗಿತ್ತು.




