Breaking
22 Sep 2026, Tue

ಅಪ್ರಾಪ್ತೆಯ ಮೈ ಮುಟ್ಟಿ ಅನುಚಿತ ವರ್ತನೆ- ಸುಳ್ಯ ಠಾಣೆಯಲ್ಲಿ ದೂರು ದಾಖಲು

ಸುಳ್ಯ : ಬಸ್ ನಲ್ಲಿ ಪ್ರಯಾಣಿಸುತ್ತಿದ್ದಾಗ ವ್ಯಕ್ತಿಯೊಬ್ಬರು ಅಪ್ರಾಪ್ತೆಯೊಂದಿಗೆ ಅನುಚಿತವಾಗಿ ವರ್ತನೆ ಮಾಡಿದ್ದಾರೆ ಎಂಬ ಆರೋಪದ ಮೇಲೆ ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪುತ್ತೂರಿನ ಪಾಣಾಜೆಯ ಅಬ್ದುಲ್ ಕುಂಞ ಎಂಬವರ ಮೇಲೆ ದೂರು ದಾಖಲಾಗಿದೆ.

ಸೋಮವಾರಪೇಟೆಯ ಕುಟುಂಬವೊಂದು ಪುತ್ತೂರಿನಿಂದ ಮಡಿಕೇರಿ ಕಡೆಗೆ ಪ್ರಯಾಣಿಸುತ್ತಿತ್ತು. ಈ ವೇಳೆ ಪುತ್ತೂರಿನಲ್ಲಿ ಬಸ್ ಏರಿದ ಅಬ್ದುಲ್ ಕುಂಞ ಅನ್ನುವ ವ್ಯಕ್ತಿ ಬಾಲಕಿಯ ಮೈ ಮುಟ್ಟಿ ಅನುಚಿತವಾಗಿ ವರ್ತನೆ ಮಾಡಿದ್ದಾರೆ ಎನ್ನಲಾಗಿದೆ.

ವ್ಯಕ್ತಿಯ ಈ ವರ್ತನೆಯನ್ನು ಆಕ್ಷೇಪಿಸಿ ಬಾಲಕಿ ಬಸ್ ನಲ್ಲಿದ್ದ ತನ್ನ ಮನೆಯವರಿಗೆ ತಿಳಿಸಿದ್ದಾಳೆ. ಜೊತೆಗೆ ಬಾಲಕಿಯೊಂದಿಗೆ ಅನುಚಿತ ವಾಗಿ ವರ್ತಿಸಿದ್ದನ್ನು ಬಸ್ ನಲ್ಲಿದ್ದವರು ನೋಡಿದ್ದಾರೆ ಅಂತ ಹೇಳಲಾಗುತ್ತಿದೆ.

ಬಳಿಕ ಅಬ್ದುಲ್ ಕುಂಞಯವರನ್ನು ಪೊಲೀಸರ ವಶಕ್ಕೆ ಒಪ್ಪಿಸಲಾಗಿದ್ದು,ಈ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *