ಮೈಸೂರು: ಇತ್ತೀಚೆಗೆ ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡ ಕಾರ್ಯರ್ತರಿಗೆ ಹಾಗೂ ಪ್ರಮುಖ ಮುಖಂಡರಿಗೆ ಕೊಲೆ ಬೆದರಿಕೆಯ ಸಂದೇಶ ಬರುತ್ತಿದ್ದು ಇದೀಗ ಪುನೀತ್ ಕೆರೆಹಳ್ಳಿಗೂ ವಾಟ್ಸಾಪ್ ಮೂಲಕ ಬೆದರಿಕೆಯ ಸಂದೇಶ ಬಂದಿದೆ.

‘ಇದ್ರಿಷ್ ಪಾಷಾ ಸಾವಿಗೆ ಪ್ರತೀಕಾರವಾಗಿ ನಿನ್ನ ಮುಗಿಸುತ್ತೇವೆ’ ಎಂದು ವಾಟ್ಸಾಪ್ ಕರೆ ಮಾಡಿ ಪುನೀತ್ ಕೆರೆಹಳ್ಳಿಗೆ ಕೊಲೆ ಬೆದರಿಕೆ ಹಾಕಿದ್ದು “next you” ಎಂದು ಉಲ್ಲೇಖಿಸಿ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾಗಿ ಜೀವಬೆದರಿಕೆ ಹಾಕಲಾಗಿದೆ.
ಈ ಕುರಿತು ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಉದಯಗಿರಿ ನಿವಾಸಿ ಅಕ್ರಮ್ ಖಾನ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ನ್ಯಾಯಾಲಯದ ಅನುಮತಿ ಪಡೆದು ಪ್ರಕರಣ ದಾಖಲಿಸಲಾಗಿದೆ.



