ಉಡುಪಿ: ಕನ್ನಡ ಬಿಗ್ ಬಾಸ್ ಸೀಸನ್ 11ರ ಫೈರ್ಬ್ರ್ಯಾಂಡ್ ಸ್ಪರ್ಧಿಯಾಗಿ ಗುರುತಿಸಿಕೊಂಡ ಚೈತ್ರಾ ಕುಂದಾಪುರ ಅವರು ಮೇ 9, 2025ರಂದು ಕಮಲಶಿಲೆಯ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀಕಾಂತ್ ಕಶ್ಯಪ್ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಈ ಬಗ್ಗೆ ಚೈತ್ರಾ ತಂದೆ ಬಾಲಕೃಷ್ಣ ನಾಯ್ಕ್ ಅವರು ಮಾಧ್ಯಮಗಳ ಮೂಲಕ ತನ್ನ ಮಗಳು ಮತ್ತು ಹೆಂಡತಿ ರೋಹಿಣಿಯವರ ವರ್ತನೆಯ ಬಗ್ಗೆ ಹಲವು ಆರೋಪಗಳನ್ನು ಮಾಡಿದ್ದರು. ಈ ಎಲ್ಲಾ ಆರೋಪಗಳಿಗೆ ರೋಹಿಣಿಯವರು ಕೌಂಟರ್ ಕೊಟ್ಟಿದ್ದು ಇದು ಆಸ್ತಿಗೋಸ್ಕರ ದೊಡ್ಡ ಮಗಳ ತಂತ್ರವಾಗಿದ್ದು, ನನ್ನ ಪತಿ ಜವಾಬ್ದಾರಿ ಇಲ್ಲದ ವ್ಯಕ್ತಿ. ಮನೆಯ ಯಾವ ಕಷ್ಟಕ್ಕೂ ಸ್ಪಂದಿಸಿದವರಲ್ಲ.

ದೊಡ್ಡ ಮಗಳು ಹೇಳಿಕೊಟ್ಟದ್ದನ್ನು ಅವರು ಹೇಳುತ್ತಿದ್ದಾರೆ. ಅವರು ಯಾವ ಮನೆಯ ಜವಾಬ್ದಾರಿಯನ್ನು ತೆಗೆದುಕೊಂಡ ವ್ಯಕ್ತಿಯಲ್ಲ.ಕೆಲಸ ಮಾಡುತ್ತೇನೆ ಎಂದು ಎಲ್ಲೆಲ್ಲಿ ಹೋಗುತ್ತಾರೆ ದುಡಿದ ಹಣವನ್ನು ದೊಡ್ಡ ಮಗಳಿಗೆ ತಂದು ಕೊಡುತ್ತಾರೆ. ನನ್ನ ದೊಡ್ಡ ಮಗಳು ಆಸ್ತಿಗೋಸ್ಕರ ತಂದೆಗೆ ಈ ರೀತಿ ಮಾತನಾಡಲು ಹೇಳಿಕೊಟ್ಟಿದ್ದಾಳೆ.ಮಕ್ಕಳಿಗೆ ಓದಿಸುವಾಗಲು ಸಹಾಯ ಮಾಡಿಲ್ಲ ಕೆಲಸಕ್ಕೆ ಹಾಕು ಎನ್ನುತ್ತಿದ್ದರು.

ಮೂರು ಹೆಣ್ಣು ಮಕ್ಕಳಿಗೂ ವಿದ್ಯಾಭ್ಯಾಸ ನೀಡಿದ್ದು ಅವರಲ್ಲ. ಆ ಕಾಲದಲ್ಲಿ ಒಂದೂವರೆ ಎರಡು ಲಕ್ಷ ರೂಪಾಯಿಯಲ್ಲಿ ಮನೆ ಕಟ್ಟಿದರು. ಅವರು ಕಟ್ಟಿದ ಮನೆ ಬಿದ್ದು ಹೋಗಿದೆ. ನನ್ನ ಗಂಡನಿಗೆ ಮಾತನಾಡಲು ಬರುವುದಿಲ್ಲ ಅವರು ಒಂದು ರೀತಿಯ ಮಾನಸಿಕ ಖಿನ್ನತೆಯ ವ್ಯಕ್ತಿ. ರಾತೋರಾತ್ರಿ ಮನೆ ಬಿಟ್ಟು ಹೋಗುತ್ತಾರೆ. ಕೆಲವೊಮ್ಮೆ ಏನು ಮಾತನಾಡುತ್ತಾರೆ ಅನ್ನೋದೇ ಗೊತ್ತಾಗಲ್ಲ.ನಾನು ಚೂರುಪಾರು ಹಣ ದೊಡ್ಡ ಮಗಳ ಗಂಡನ ಸೊಸೈಟಿಯಲ್ಲಿ ಇಟ್ಟಿದ್ದೆ.

ಅದನ್ನು ಕೂಡ ನನ್ನ ಗಂಡ ದೊಡ್ಡ ಮಗಳಿಗೆ ಕೊಟ್ಟಿದ್ದಾರೆ. ನಮ್ಮ ಭೂಮಿ ಬೇಕು ಎಂದು ದೊಡ್ಡ ಮಗಳು ಬೆನ್ನು ಬಿದ್ದಿದ್ದಾಳೆ. ಅವಳ ಮನೆಗೆ ಸಹಾಯ ಮಾಡಲು ಚೈತ್ರಾ ಜಾಗ ಬರೆದುಕೊಟ್ಟಿದ್ದಾಳೆ. 25 ಲಕ್ಷ ಲೋನ್ ನಾವೇ ಮಾಡಿಕೊಟ್ಟಿದ್ದೇವೆ. ದೊಡ್ಡ ಮಗಳು ಅಪ್ಪನ ಬಳಿ ಸಹಿ ಪಡೆದು ಜಾಗ ಒಳ ಹಾಕುವ ಸಂಚು ಮಾಡಿದ್ದಾಳೆ. ಅಮ್ಮ ಮೋಸ ಮಾಡಿದಳು ಎಂದು ಹೇಳಿಕೊಂಡು ಬರುತ್ತಿದ್ದಾಳೆ. ಅಪ್ಪ ಮದುವೆಗೆ ಬರದ ಹಾಗೆ ಮಗಳು ತಡೆದಿದ್ದಾಳೆ.

ಕುಂದಾಪುರದವರೆಗೆ ಬಂದವರನ್ನು ಮನೆಗೆ ಕರೆದುಕೊಂಡು ಹೋಗಿದ್ದಾಳೆ. ನಮ್ಮ ಮರ್ಯಾದೆ ತೆಗೆಯಲು ಈ ರೀತಿ ಮಾಡಿದ್ದಾಳೆ.ತಂದೆಗೆ ಮದುವೆಗೆ ಬರಬೇಕು ಎಂದು ಬಹಳ ಇಷ್ಟ ಇತ್ತು. ತಾನೇ ಹೋಗಿ ಮದುವೆ ಕಾಗದ ಹಿರಿಯರ ಮನೆಗೆ ಕೊಟ್ಟು ಬಂದಿದ್ದಾರೆ. ಮನೆ ಪೇಂಟಿಂಗ್ ಕೂಡ ತಾನೇ ನಿಂತು ಮಾಡಿಸಿದ್ದಾರೆ. ಮದುವೆಗೆ ಬರುತ್ತೇನೆ ಎಂದು ಹೇಳಿದವರನ್ನು ದೊಡ್ಡ ಮಗಳು ತಡೆದಿದ್ದಾಳೆ. ಅವಳಿಗೆ ಆಸ್ತಿ ಪಡೆದ ನಾನು ಸಹಿ ಹಾಕಿಲ್ಲ ಎಂದು ಹೀಗೆ ಮಾಡುತ್ತಿದ್ದಾಳೆ. ನನ್ನ ಗಂಡ ಯಾವ ವಿಷಯದಲ್ಲಿ ಜವಾಬ್ದಾರಿ ತಗೊಂಡಿಲ್ಲ.
ಅವರಿಗೆ ಮಾತನಾಡಲು ಬರುವುದಿಲ್ಲ. ಅವರ ಅಣ್ಣ ಎಲ್ಲರೂ ಒಂದು ರೀತಿ ಮಾನಸಿಕ ವ್ಯಕ್ತಿಗಳು. ದೊಡ್ಡ ಮಗಳ ಮದುವೆಗೂ ಅವರು ಸರಿಯಾಗಿ ಬಂದಿಲ್ಲ. ಎಲ್ಲೋ ಬಸ್ಸು ಹತ್ತಿ ಕೂತವರನ್ನು ಹುಡುಗರು ಕರೆದುಕೊಂಡು ಬಂದಿದ್ದರು.ಚೈತ್ರಾ ಕುಂದಾಪುರ ಅವರ ಪತಿ 12 ವರ್ಷದಿಂದ ನಮ್ಮ ಮನೆಯಲ್ಲಿ ಇರಲಿಲ್ಲ. ಎರಡು ಮೂರು ವರ್ಷದ ಹಿಂದೆ ನಮಗೆ ಅವನ ಪರಿಚಯವಾಗಿತ್ತು. ಅವನು ನಮ್ಮ ಮನೆಗೆ ಬಂದು ನೀರು ಸಹ ಕುಡಿಯುತ್ತಿರಲಿಲ್ಲ.


