Breaking
22 Mar 2026, Sun

ಚೈತ್ರಾ ಕುಂದಾಪುರ ನೀವು ಹೇಗೆ ಎಂದು ಎಲ್ಲರಿಗೂ ಗೊತ್ತಿದೆ ಎಂದದ್ದು ಯಾರು..?

ಉಡುಪಿ: ಚೈತ್ರಾ ಕುಂದಾಪುರ ಅವರ ಮದುವೆಯ ಬಳಿಕ ಅವರ ತಂದೆ ಬಾಲಕೃಷ್ಣ ನಾಯ್ಕ್ ಅವರು ತಮ್ಮ ಮಗಳ ಮೇಲೆ ಹಲವು ಆರೋಪಗಳ ಸುರಿಮಳೆಗೈದಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಚೈತ್ರಾ ಕುಂದಾಪುರ ಅವರು ತಮ್ಮ ತಂದೆಯನ್ನು ಕುಡುಕ ಎಂದು ಕರೆದಿದ್ದಾರೆ. ಹೆತ್ತು ಮಕ್ಕಳನ್ನು ಸಾಕಗದೇ ಕುಡಿದುಕೊಂಡು, ಕ್ವಾಟರ್ ಕೊಡಿಸಿದವರ ಪರ ಮಾತನಾಡಿಕೊಂಡಿರುತ್ತಾರೆ ಎಂದು ಚೈತ್ರಾ ತಿರುಗೇಟು ನೀಡಿದ್ದಾರೆ.

ಇದಕ್ಕೆ ಪ್ರತಿಯಾಗಿ ಇತ್ತ ಬಾಲಕೃಷ್ಣ ಅವರು ಕೂಡ ಸವಾಲು ಹಾಕಿದ್ದು ನನಗೆ ಕುಡಿಯುವ ಅಭ್ಯಾಸ ಇದೆ ಎಂಬುದಾದರೆ ಊರಿನ ಜನರು ಹೇಳಲಿ. ವೈದ್ಯರಿಂದ ನನ್ನ ರಕ್ತಪರೀಕ್ಷೆ ಮಾಡಿ ಸಾಬೀತುಪಡಿಸಲಿ’ ನಮ್ಮ ತಂದೆಯ ಕಾಲದಿಂದಲೂ ಯಾರೂ ಕುಡಿದಿಲ್ಲ. ಒಂದು ವೇಳೆ ಕುಡುಕ ಆಗಿದ್ದರೆ ನನಗೆ ಹೆಣ್ಣು ಕೊಡುತ್ತಿರಲಿಲ್ಲ, ಕುಡುಕ ಎಂಬ ಮಾತನ್ನು ನಾನು ಒಪ್ಪಲ್ಲ ಎಂದು ನೇರವಾಗಿ ಸವಾಲು ಹಾಕಿದ್ದಾರೆ.

ಈ ರೀತಿ ಆರೋಪ-ಪ್ರತ್ಯಾರೋಪಗಳು ಮುಂದುವರಿದಿದೆ.ಈ ನಡುವೆ ಚೈತ್ರಾ ಅವರನ್ನು ಹಲವು ಅಭಿಮಾನಿಗಳು ಬೆಂಬಲಿಸುತ್ತಿದ್ದು ಚೈತ್ರಾ ಅವರಿಗೆ ಇನ್ ಸ್ಟಾಗ್ರಾಮ್ ನಲ್ಲಿ ಒಂದಷ್ಟು ಸಂದೇಶಗಳು ಬಂದಿದ್ದು, ಅದರ ಸ್ಕ್ರಿನ್ ಶಾಟ್ನ್ನು ಚೈತ್ರಾ ಹಂಚಿಕೊಂಡಿದ್ದಾರೆ. ಅಕ್ಕ ನಾನು ಕುಂದಾಪುರದವಳೇ. ನೀವು ಹೇಗೆ, ನಿಮ್ಮನೆಯವರು ಹೇಗೆ ಎಂದು ಎಲ್ಲರಿಗೂ ಗೊತ್ತಿದೆ. ನಿಮ್ಮ ತಂದೆ ಹೇಗೆ ಎಂದು ನಿಮ್ಮ ಊರಿನವರಿಗೂ ಗೊತ್ತಿದೆ.

ಸೋಶಿಯಲ್ ಮೀಡಿಯಾದವರಿಗೆ ನಿಮ್ಮ ತಂದೆ ಬಗ್ಗೆ ಗೊತ್ತಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಸಾವಿರ ಮಾತನಾಡುತ್ತಾರೆ. ಎಲ್ಲೋ ಕುಳಿತುಕೊಂಡು ಏನೋ ಬರೆದು ಹಾಕ್ತಾರೆ. ಹಾಗಂತ ನೀವು ಸರಿ ಇಲ್ಲ ಅಂತ ಅರ್ಥ ಅಲ್ಲ. ಇಗಷ್ಟೇ ಮದುವೆ ಆಗಿದ್ದೀರಾ, ಖುಷಿಯಿಂದ ಇರಿ. ನಿಮ್ಮ ತಂದೆ ಕುಡುಕ ಅನ್ನೋದು ಸೋಶಿಯಲ್ ಮೀಡಿಯಾದವರಿಗೆ ಗೊತ್ತಿಲ್ಲ. ಆದರೆ, ನಿಮ್ಮ ಊರಿನವರಿಗೆ ಗೊತ್ತು ಎಂದು ಅಭಿಮಾನಿಯೊಬ್ಬರು ಚೈತ್ರಾ ಕುಂದಾಪುರಗೆ ಸಂದೇಶ ಕಳುಹಿಸಿದ್ದಾರೆ.

Leave a Reply

Your email address will not be published. Required fields are marked *