Breaking
22 Mar 2026, Sun

ಟೆಂಪೋ ಟ್ರಾವೆಲರ್‌, ಕಾರು ಢಿಕ್ಕಿ: 3 ಮಂದಿಗೆ ಗಾಯ ಒಬ್ಬರಿಗೆ ಗಂಭೀರ

ಕಡಬ: ಟೆಂಪೋ ಟ್ರಾವೆಲರ್‌ ಮತ್ತು ಮಾರುತಿ-800 ಕಾರು ಪರಸ್ಪರ ಢಿಕ್ಕಿಯಾಗಿ 4 ಮಂದಿ ಗಾಯಗೊಂಡಿರುವ ಘಟನೆ ಸುಬ್ರಹ್ಮಣ್ಯ-ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಕೊಯಿಲ ಗ್ರಾಮದ ಗಂಡಿಬಾಗಿಲು ಬಳಿ ನಡೆದಿದೆ.

ಶಿವಮೊಗ್ಗ ಮೂಲದ ಯಾತ್ರಿಕರು ಟೆಂಪೋ ಟ್ರಾವೆಲರ್ನಲ್ಲಿ ಸುಬ್ರಹ್ಮಣ್ಯ ಕ್ಷೇತ್ರ ದರ್ಶನ ಮಾಡಿ ಅಲ್ಲಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಪರಿಣಾಮ ಕಡಬ ತಾಲೂಕು ಆಲಂಕಾರು ಪರಿಸರದ ನಿವಾಸಿಗಳಾದ ಪದ್ಮನಾಭ, ಸುದರ್ಶನ್‌, ಚೇತನ್‌, ಸತೀಶ್‌ ಗಾಯಗೊಂಡಿದ್ದಾರೆ.


ಒಬ್ಬರು ಗಂಭೀರ ಗಾಯಗೊಂಡಿದ್ದು ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತದ ವೇಳೆ ನಜ್ಜುಗುಜ್ಜಾದ ಕಾರಿನಲ್ಲಿ ಹೊರಬರಲಾಗದೆ ಸಿಲುಕಿಕೊಂಡಿದ್ದ ಗಾಯಾಳುಗಳನ್ನು ಸ್ಥಳೀಯರಾದ ನಿಸಾರ್‌, ಸುಲೆ„ಮಾನ್‌, ಬಾಯಿಸ್‌ ಅವರು ಸ್ಥಳಕ್ಕೆ ಧಾವಿಸಿ ಹೊರ ತೆಗೆದು ನಿಸಾರ್‌ ಅವರು ತನ್ನ ಆಟೋರಿಕ್ಷಾದಲ್ಲಿ ಉಪ್ಪಿನಂಗಡಿಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ
ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *