Breaking
19 Sep 2026, Sat

ಬಿಜೆಪಿ ಮುಖಂಡ ಮುರಳಿ ಕೃಷ್ಣ ಹಸಂತಡ್ಕ ಮೇಲೆ ತಲ್ವಾರ್ ತೋರಿಸಿ ಬೆದರಿಸಿದ ಆರೋಪ

ಪುತ್ತೂರು: ದಂಪತಿಗಳಿಗೆ ತಲ್ವಾರು ತೋರಿಸಿ ಜೀವ ಬೆದರಿಕೆ ಹಾಕಿರುವ ಆರೋಪದ ಮೇಲೆ ಪುತ್ತೂರು ಬಿಜೆಪಿ ಮುಖಂಡ ಮುರಳಿ ಕೃಷ್ಣ ಹಸಂತಡ್ಕ ವಿರುದ್ದ ಪ್ರಕರಣ ದಾಖಲಾಗಿದೆ.

ಬಂಟ್ವಾಳ ತಾಲೂಕಿನ ಪುಣಚ ನಡ್ಸಾರ್ ನಿವಾಸಿ ಹರೀಶ್ ಎನ್ ಮತ್ತು ಶ್ರೀದೇವಿ ದಂಪತಿಗೆ ಮುರಳಿ ಕೃಷ್ಣ ಹಸಂತಡ್ಕ ಅವರು ಜೀವ ಬೇದರಿಕೆ ಹಾಕಿದ್ದಾರೆ ಅನ್ನುವ ಆರೋಪ ಕೇಳಿ ಬಂದಿದೆ.

ಈ ಕುರಿತಂತೆ ಹರೀಶ್ ಮತ್ತು ಶ್ರೀ ದೇವಿ ಅವರು ದೂರು ನೀಡಿದ್ದು ಏ.16 ರಂದು ಮನೆಯಲ್ಲಿ ಪತ್ನಿಯೊಬ್ಬಳೇ ಇದ್ದ ಸಮಯದಲ್ಲಿ ಮುರಳಿ ಕೃಷ್ಣ ಹಸಂತಡ್ಕ ಮನೆಗೆ ಬಂದಿದ್ದು, ನಿನ್ನ ಗಂಡನಲ್ಲಿ ಸಾರಡ್ಕದ ಪಂಪ್ ವ್ಯವಹಾರವನ್ನು ಬಿಟ್ಟು ಕೊಡಲು ಹೇಳು ಎಂಬುವುದಾಗಿ ಬೆದರಿಸಿದ್ದಾರೆ ಎಂದು ನೀಡಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಬಳಿಕ ಏ.19ರಂದು ಪುನ: ಮನೆಗೆ ಬಂದು ಪತ್ನಿ ಶ್ರೀದೇವಿ ಮತ್ತು ಹಾಗೆ ನನಗೆ ತಲ್ವಾರ್ ತೋರಿಸಿ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ.

ಸದ್ಯ ಹರೀಶ್ ಮತ್ತು ಶ್ರೀದೇವಿ ದಂಪತಿ ಬಂಟ್ವಾಳ ನ್ಯಾಯಾಲಯಕ್ಕೆ ನೀಡಿದ ದೂರಿನ ಅನ್ವಯ ನ್ಯಾಯಾಲಯದ ಆದೇಶದಂತೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

Leave a Reply

Your email address will not be published. Required fields are marked *