ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್(ರಿ.) ಬಂಟ್ವಾಳ ಇದರ ಪುಂಜಾಲಕಟ್ಟೆ ವಲಯದ ಮಣಿನಾಲ್ಕುರು ಶ್ರೀ ಉಳ್ಳಾಲ್ತಿ ಉಲ್ಲಾಕುಲು ಕೊಡಮನಿತ್ತಾಯ ದೈವಸ್ಥಾನದ ಅಭಿವೃದ್ಧಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗದಿಂದ ಮಂಜೂರಾದ ಅನುದಾನ ರೂ. ಒಂದು ಲಕ್ಷದ ಚೆಕ್ ಹಸ್ತಾಂತರ ಮಾಡಲಾಯಿತು.
ಈ ಸಂದರ್ಭದಲ್ಲಿ ಯೋಜನೆಯ ಕೇಂದ್ರ ಒಕ್ಕೂಟದ ಅಧ್ಯಕ್ಷರ ಚಿದಾನಂದ ರೈ ಕಕ್ಯ, ಮಣಿನಾಲ್ಕುರು ಒಕ್ಕೂಟದ ಅಧ್ಯಕ್ಷ ಜಗದೀಶ್ ಪೂಜಾರಿ, ದೇವಸ್ಥಾನ ಸಮಿತಿಯ ದಯಾನಂದ ಶೆಟ್ಟಿ, ಪ್ರವೀಣ್ ಶೆಟ್ಟಿ,ಸಂಜೀವ ಶೆಟ್ಟಿ, ವಲಯ ಮೇಲ್ವಿಚಾರಕಿ ಶ್ರೀಮತಿ ಸವಿತಾ,ಸೇವಾಪ್ರತಿನಿಧಿ ವಿಜಯಲಕ್ಷ್ಮಿ,ಮಣಿ ನಾಲ್ಕುರು ಒಕ್ಕೂಟ ದ ಪದಾಧಿಕಾರಿಗಳು ಉಪಸ್ಥಿತರಿದ್ದರು.


