ಬಂಟ್ವಾಳ: ತಾಲೂಕಿನ ಪಲ್ಲಮಜಲು ಶ್ರೀ ರಾಮಭಕ್ತಾಂಜನೇಯ ಭಜನಾ ಮಂದಿರದಲ್ಲಿ ಮೇ 16ರಿಂದ 18ರ ವರೆಗೆ ನಡೆಯಲಿರುವ 108 ಪವಮಾನ ಪಾರಾಯಣ ಸಹಿತ ಮಹಾಪವಮಾನ ಯಾಗದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಶ್ರೀರಾಮ ಭಕ್ತಾಂಜನೇಯ ಭಜನಾ ಮಂದಿರ ಪಲ್ಲಮಜಲು ಇಲ್ಲಿ ನಡೆಯಿತು.
ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಾಚನ ನೀಡಿದರು.
ಕಾರ್ಯಕ್ರಮದ ಆರಂಭದಲ್ಲಿ ಮೌನಪ್ರಾರ್ಥನೆಯ ಮೂಲಕ ಕಾಶ್ಮೀರ ದುರ್ಘಟನೆಯಲ್ಲಿ ಮಡಿದ ಹಿಂದೂಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ಸಂಧರ್ಭದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಅಧ್ಯಕ್ಷರಾದ ಡಾ. ಪ್ರಭಾಕರ್ ಭಟ್ ಕಲ್ಲಡ್ಕ, ಮಾಜಿ ಶಾಸಕರುಗಳಾದ ರುಕ್ಮಯ ಪೂಜಾರಿ, ಕೆ. ಪದ್ಮನಾಭ ಕೊಟ್ಟಾರಿ, ಯಾಗ ಸಮಿತಿ ಅಧ್ಯಕ್ಷ ಸಂದೇಶ್ ಶೆಟ್ಟಿ, ಪ್ರಮುಖರಾದ ಸುಲೋಚನಾ ಜಿ.ಕೆ. ಭಟ್, ಗಣೇಶ್ ದಾಸ್ ಪಲ್ಲಮಜಲು, ಸೇಸಪ್ಪ ದಾಸ್ ಪಲ್ಲಮಜಲು, ಸಂದೇಶ್ ದರಿಬಾಗಿಲು ಮತ್ತಿತರರು ಉಪಸ್ಥಿತರಿದ್ದರು.
ರಾಮ್ ದಾಸ್ ಬಂಟ್ವಾಳ ಪ್ರಸ್ತಾವನೆಗೈದರು. ಭರತ್ ಕೊಟ್ಟಾರಿ ಕಲ್ಲಡ್ಕ ನಿರೂಪಿಸಿದರು. ತುಳಸಿ ಸುನೀಲ್ ಪ್ರಾರ್ಥಿಸಿದರು. ಹರಿಪ್ರಸಾದ್ ಭಂಡಾರಿಬೆಟ್ಟು ಸ್ವಾಗತಿಸಿದರು. ಸತೀಶ್ ಪಲ್ಲಮಜಲು ವಂದಿಸಿದರು.

