Breaking
19 Sep 2026, Sat

ಬಸ್ ಚಾಲಕನ ಹುಚ್ಚಾಟ: 180 ಡಿಗ್ರಿ ತಿರುಗಿದ ಖಾಸಗಿ ಬಸ್

ಉಡುಪಿ: ನಗರದ ಬನ್ನಂಜೆ ಬಳಿ ಖಾಸಗಿ ಬಸ್ ನ ಚಾಲಕ ಏಕಾಏಕಿ ಬ್ರೇಕ್ ಹಾಕಿದ ಪರಿಣಾಮ ಬಸ್ಸು 180 ಡಿಗ್ರಿ ಸುತ್ತಿದ ಭಯಾನಕ ಘಟನೆ ನಡೆದಿದೆ.

ಕುಂದಾಪುರದಿಂದ ಉಡುಪಿ ನಗರ ಪ್ರವೇಶಿಸುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಬಸ್ ಚಾಲಕನ ಅತಿ ವೇಗವೇ ಈ ಘಟನೆಗೆ ಕಾರಣ ಎಂದು ತಿಳಿದು ಬಂದಿದೆ.

ಈ ಘಟನೆಯಿಂದ ಬಸ್ ನೊಳಗೆ ಕುಳಿತಿದ್ದ ಪ್ರಯಾಣಿಕರು ಒಮ್ಮೆ ಕಂಗಾಲಾಗಿ ಭಯಭೀತರಾಗಿದ್ದಾರೆ, ಹಾಗಿದ್ದರೂ ಚಾಲಕನು ಏನೂ ಆಗದಂತೆ ಅತಿ ವೇಗದಿಂದ ಬಸ್ ಚಲಾಯಿಸುವುದನ್ನು ಮುಂದುವರೆಸಿ ಮತ್ತೊಮ್ಮೆ ರಾಂಗ್ ಸೈಡ್ ನಲ್ಲಿ ಹೋಗಿ ಯೂಟರ್ನ್ ತೆಗೆದುಕೊಂಡು ಅತಿ ವೇಗದಿಂದ ಬಸ್ ಚಲಾಯಿಸಿದ್ದಾನೆ ಎಂದು ತಿಳಿದು ಬಂದಿದೆ.

ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಪ್ರಯಾಣಿಕರ ಜೀವದ ಜತೆ ಖಾಸಗಿ ಬಸ್ ಚಾಲಕರು ಚೆಲ್ಲಾಟ ಆಡುತ್ತಿದ್ದಾರೆಯೇ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸರನ್ನು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *