Breaking
21 Jun 2025, Sat

ಮಂಗಳೂರಿನಲ್ಲಿ ಯಶಸ್ವಿಯಾಗಿ ಪೂರ್ಣಗೊಂಡ ಭಾರತದ ಅತಿದೊಡ್ಡ ಭೂಗತ ಎಲ್‌ಪಿಜಿ ಸಂಗ್ರಹ ಘಟಕದ ಕಾಮಗಾರಿ

ಮಂಗಳೂರು: ನಗರದಲ್ಲಿ ಭಾರತದ ಅತಿದೊಡ್ಡ ಭೂಗತ ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್‌ಪಿಜಿ) ಸಂಗ್ರಹ ಘಟಕದ ನಿರ್ಮಾಣ ಯಶಸ್ವಿಯಾಗಿ ಪೂರ್ಣಗೊಂಡಿದೆ.

ಈ ಸುರಂಗದಲ್ಲಿ 80,000 ಮೆಟ್ರಿಕ್ ಟನ್ ಎಲ್‌ಪಿಜಿ ಸಂಗ್ರಹಿಸಬಹುದಾಗಿದೆ.

2019ರಲ್ಲಿ ನಿರ್ಮಾಣ ಆರಂಭಗೊಂಡ ಈ ಯೋಜನೆಗೆ ₹800 ಕೋಟಿ ವೆಚ್ಚವಾಗಿದ್ದು, 500 ಮೀಟರ್ ಆಳದಲ್ಲಿ ಕಟ್ಟಲಾಗಿದೆ. ಸುರಕ್ಷತೆ ಪರಿಶೀಲನೆಯ ಭಾಗವಾಗಿ ಮೇ 9 ರಿಂದ ಜೂನ್ 6ರವರೆಗೆ “ಕ್ಯಾವರ್ನ್ ಆಕ್ಸೆಸ್ಟೆನ್ಸ್ ಟೆಸ್ಟ್” (CAT) ನಡೆಸಲಾಗಿದೆ.

ಈ ಘಟಕವು ದೇಶದಲ್ಲಿ ತುರ್ತು ಪರಿಸ್ಥಿತಿಗಳಲ್ಲಿ ಅನಿಲದ ಅವಶ್ಯಕತೆ ಪೂರೈಸಲು ಸಹಾಯ ಮಾಡುತ್ತದೆ.

ಈ ಹಿಂದೆ ಮಂಗಳೂರಿನ ಪೆರ್ಮುಡೆ (1.5 ಲಕ್ಷ ಟನ್) ಮತ್ತು ಪಾದೂರು (2.5 ಲಕ್ಷ ಟನ್) ಎಂಬ ಪ್ರದೇಶಗಳಲ್ಲಿ ಕಚ್ಚಾ ತೈಲ ಸಂಗ್ರಹ ಘಟಕಗಳಿದ್ದು, ಎಲ್‌ಪಿಜಿಗೆ ಮಾತ್ರ ನಿಗದಿತ ಘಟಕವಾಗಿ ನಿರ್ಮಿತವಾದ ಈ ಘಟಕವು ವಿಶಾಖಪಟ್ಟಣಂನ (60,000 ಟನ್) ಘಟಕವನ್ನು ಮೀರಿಸಿ, ದೇಶದ ಅತಿದೊಡ್ಡ ಭೂಗತ ಎಲ್‌ಪಿಜಿ ಘಟಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

Leave a Reply

Your email address will not be published. Required fields are marked *