ಬಜಗೋಳಿಯ ಗೋ ಶಾಲೆಯಿಂದ ಮೂರು ದನಗಳ ಕಳವು

ಕಾರ್ಕಳ: ತಾಲೂಕಿನ ಮುಡಾರು ಗ್ರಾಮದ ಬಜಗೋಳಿಯಲ್ಲಿ ಗೋಶಾಲೆಯಿಂದ ಮೂರು ದನಗಳನ್ನು ಕಳವು ಮಾಡಿರುವ ಘಟನೆ ಜೂನ್ 16 ರಂದು ನಡೆದಿದೆ.

ಬಜಗೋಳಿಯಲ್ಲಿ ಅಹಿಂಸಾ ಅನಿಮಲ್‌ ಕೇರ್‌ ಟ್ರಸ್ಟ್‌ ಗೋಶಾಲೆಯನ್ನು ನಡೆಸುತ್ತಿದ್ದು, ಜೂನ್‌ 16ರಂದು ಮುಂಜಾನೆ 4 ಗಂಟೆ ಸುಮಾರಿಗೆ ಮೂರು ದನಗಳು ಕಳುವಾಗಿದೆ ಎಂದು ತಿಳಿದು ಬಂದಿದೆ.

ಕಳವಾದ ದನಗಳ ಮೌಲ್ಯ ಸುಮಾರು 10 ಸಾವಿರ ರೂಪಾಯಿಯಾಗಬಹುದು ಎಂದು ಟ್ರಸ್ಟ್ ಸಂಚಾಲಕ ಎಂ.ಕೆ. ವಿರಂಜಯ್‌ ಅವರು ದೂರಿನಲ್ಲಿ ತಿಳಿಸಿದ್ದಾರೆ.

ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಗಾಯಗೊಂಡ, ಕಾಯಿಲೆಗೊಳಗಾದ, ಬೀದಿ ಪಾಲಾದ ಬೆಕ್ಕು, ನಾಯಿ ಮತ್ತು ದನಗಳನ್ನು ತಂದು ಆರೈಕೆಯನ್ನು ಈ ಗೋಶಾಲೆ ನಿರ್ವಹಿಸುತ್ತದೆ ಎಂದು ಎಂ.ಕೆ. ವಿರಂಜಯ್‌ ವಿವರಿಸಿದ್ದಾರೆ.

Leave a Reply

Your email address will not be published. Required fields are marked *