Breaking
13 May 2026, Wed

ಪ್ರಾಥಮಿಕ ಅರೋಗ್ಯ ಕೇಂದ್ರ ಮಾಣಿ ಇಂಟರ್ ಲಾಕ್ ಅಳವಡಿಕೆ ಉದ್ಘಾಟನೆ ಹಾಗೂ ಆರೋಗ್ಯ ಕೇಂದ್ರದ ಮೂಲಭೂತ ಸೌಕರ್ಯಕ್ಕೆ ಸಹಕರಿಸದವರಿಗೆ ಅಭಿನಂದನಾ ಕಾರ್ಯಕ್ರಮ

ಮಾಣಿ: ಬಂಟ್ವಾಳ ತಾಲೂಕು ಪ್ರಾಥಮಿಕ ಅರೋಗ್ಯ ಕೇಂದ್ರ ಮಾಣಿ ಇಲ್ಲಿ ಬಂಟ್ವಾಳ ತಾಲೂಕಿನ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಬಂಟ್ವಾಳ, ಆರೋಗ್ಯ ಕೇಂದ್ರ ವ್ಯಾಪ್ತಿಯ ಗ್ರಾಮ ಪಂಚಾಯತ್ ಹಾಗೂ ವಿವಿಧ ದಾನಿಗಳ ಸಹಕಾರದಿಂದ ಆಸ್ಪತ್ರೆಯ ಆವಾರಣಕ್ಕೆ ಅಲವಡಿಸಿದ ಇಂಟೆರ್ ಲಾಕ್ ಉದ್ಘಾಟನೆ ಹಾಗೂ ಅರೋಗ್ಯಕೇಂದ್ರದ ಮೂಲಭೂತ ಸೌಕರ್ಯಕ್ಕೆ ಸಹಕರಿಸದವರಿಗೆ ಅಭಿನಂದನಾ ಕಾರ್ಯಕ್ರಮ ಮೇ 13 ಬುಧವಾರ ಮಾಣಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜರಗಿತು.
ಕಾರ್ಯಕ್ರಮವನ್ನು ಶ್ರೀ ಉಳ್ಳಾಲ್ತಿ ದೇವಸ್ಥಾನ ಅನಂತಾಡಿ ಅಧ್ಯಕ್ಷರಾದ ನರೇಂದ್ರ ರೈ ನೆಲ್ತೋಟು ಉದ್ಘಾಟಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳಾದ ಡಾಕ್ಟರ್ ಶಶಿಕಲಾ ಆರೋಗ್ಯ ಕೇಂದ್ರದ ಅಭಿವೃದ್ಧಿಯಲ್ಲಿ ಸಹಕರಿಸಿದವರನ್ನು ಸ್ಮರಿಸಿದರು.

ಈ ಸಂದರ್ಭದಲ್ಲಿ ಮಾಜಿ ಸೈನಿಕರಾದ ಕೆ ಟಿ ನಾಯ್ಕ, ಮಾಧವ ಕುಲಾಲ್, ಹಾಗೂ ಆರೋಗ್ಯ ಕೇಂದ್ರದ ಮೂಲಭೂತ ಸೌಕರ್ಯಕ್ಕೆ ಸಹಕಾರ ನೀಡಿದವರನ್ನು ರವರನ್ನು ಗೌರವಿಸಿ ಅಭಿನಂದಿಸಲಾಯಿತು.

ಕಾರ್ಯಕ್ರಮದ ವೇದಿಕೆಯಲ್ಲಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಬಂಟ್ವಾಳ ಅಧ್ಯಕ್ಷ ಮೋನಪ್ಪ ಪೂಜಾರಿ ಮೊಗರ್ನಾಡ್,ಪ್ರಗತಿಪರ ಕೃಷಿಕರಾದ ಪ್ರಪುಲ್ಲ ರೈ ಮಾಣಿ, ತಾಲೂಕು ಆರೋಗ್ಯ ಅಧಿಕಾರಿ ಡಾ. ಅಶೋಕ್ ರೈ, ಮಾಣಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರುಗಳಾದ ಸುದೀಪ್ ಕುಮಾರ್ ಶೆಟ್ಟಿ,ಬಾಲಕೃಷ್ಣ ಆಳ್ವ ಕೊಡಾಜೆ, ಇಬ್ರಾಹಿಂ ಕೆ, ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಗಣ್ಯರಾದ ಡಾ. ಮನೋಹರ್ ರೈ, ಡಾ ಶ್ರೀನಾಥ್ ಆಳ್ವ , ಡಾ. ಬಿ ಎಸ್ ನಾಯಕ್, ಅನಂತಾಡಿ ಪಂಚಾಯತ್ ಮಾಚಿ ಅಧ್ಯಕ್ಷ ಸನತ್ ರೈ ಅನಂತಾಡಿ,ಪೆರಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಕುಶಾಲ ಪರಾಜೆ, ಪೆರ್ನೇ ಪಂಚಾಯತ್ ಕಾರ್ಯದರ್ಶಿ ರಾಜೇಶ್, ಆರೋಗ್ಯ ಕೇಂದ್ರದ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು

ಆಸ್ಪತ್ರೆ ಸಿಬ್ಬಂದಿಗಳಾದ ಉದಯ ಹಾಗೂ ವಸೂದ ಪ್ರಾರ್ಥಿಸಿ, ಸುದೀಪ್ ಕುಮಾರ್ ಶೆಟ್ಟಿ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿದರು. ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ ಅರುಂಧತಿ ವಂದಿಸಿದರು. ಬಾಲಕೃಷ್ಣ ಅಲ್ವಾ ಕೊಡಾಜೆ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *