Breaking
12 May 2026, Tue

ಹಿರಿಯರ ಸೇವಾ ಪ್ರತಿಷ್ಠಾನದಿಂದ ಸ್ವಾರ್ಥ ರಹಿತ ಸೇವೆ: ಬಿ ವಿಠಲ ರೈ

ಮೆಲ್ಕಾರ್: ಹಿರಿಯರ ಸೇವಾ ಪ್ರತಿಷ್ಠಾನದ ಮೂಲಕ ನಡೆಸುತ್ತಿರುವ ಸೇವಾ ಕಾರ್ಯಗಳು ವಿಶೇಷ ಮೌಲ್ಯವನ್ನು ಹೊಂದಿದೆ. ಸ್ವಾರ್ಥ ರಹಿತವಾದ ಈ ಸೇವಾ ಕಾರ್ಯಗಳನ್ನು ಎಲ್ಲರೂ ಬೆಂಬಲಿಸಬೇಕೆಂದು ಇದೆ. ಶ್ರೀವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಬಿ .ವಿಠಲ ರೈ ತಿಳಿಸಿದರು. ಬೆಂದ್ರುತೀರ್ಥ ಕ್ಷೇತ್ರದಲ್ಲಿ ಜರಗಿದ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ.ರಿ ಮೆಲ್ಕಾರ್ ಇದರ ಕೇಂದ್ರೀಯ ಸಮಿತಿಯ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಶಿವಾಜಿ ಯುವ ಸೇನೆ ರಿ. ಗೌರವಾಧ್ಯಕ್ಷರಾದ ಚಂದ್ರಹಾಸ ಮೂರೂರು ಬೆಂದ್ರುತೀರ್ಥದ ಇತಿಹಾಸದ ಬಗ್ಗೆ ಮಾಹಿತಿ ನೀಡಿ ಸ್ಥಳೀಯರ ಮತ್ತು ಪುತ್ತೂರು ಕ್ಷೇತ್ರದ ಶಾಸಕರ ಸಹಕಾರದಿಂದ ಬೆoದ್ರುತೀರ್ಥದ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗುತ್ತಿದೆ ಎಂದರು.
ಬೆಂದ್ರತೀರ್ಥದ ರಕ್ಷಣೆಗೆ ಮತ್ತು ಪ್ರವಾಸಿ ತಾಣವಾಗಿಸುವ ಪ್ರಯತ್ನ ಆದಷ್ಟು ಶೀಘ್ರವಾಗಿ ನಡೆದು ಪ್ರಸಿದ್ಧಿಯನ್ನು ಪಡೆಯಲಿ ಬೆಂದ್ರುತೀರ್ಥ ಟ್ರಸ್ಟಿನ ಸದಸ್ಯರಾದ ಸುಬ್ರಹ್ಮಣ್ಯ ದೇವಕಾನ ತಿಳಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹಿರಿಯರ ಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ ಕಯ್ಯೂರು ನಾರಾಯಣ ಭಟ್ ಮಾತನಾಡಿ ಮೆಲ್ಕಾರ್ ಶಂಕರಪತ್ತಿನ ಸಹಕಾರಿ ಸಂಘದ ಶಾಖೆಯನ್ನು ಹಿರಿಯರ ಸೇವಾ ಪ್ರತಿಷ್ಠಾನದ ನೇತೃತ್ವದಲ್ಲಿ ಪುತ್ತೂರಿನಲ್ಲಿ ತೆರೆಯುವ ಬಗ್ಗೆ ಮತ್ತು ಮಂಚಿ ಗೋಶಾಲೆಯ ಮೇವಿನ ಅಭಿಯಾನಕ್ಕೆ ಎಲ್ಲರೂ ಸಹಕರಿಸಬೇಕೆಂದು ತಿಳಿಸಿದರು.

ಶಿವಾಜಿ ಯುವಸೇನೆ ರಿ . ಬೆಂದ್ರುತೀರ್ಥ ಪದಾಧಿಕಾರಿಗಳನ್ನು ಮತ್ತು ಸದಸ್ಯರನ್ನು ಹಿರಿಯರ ಸೇವಾ ಪ್ರತಿಷ್ಠಾನದಿಂದ ಗೌರವಿಸಲಾಯಿತು. ಶಿವಾಜಿ ಯುವ ಸೇನೆ ಅಧ್ಯಕ್ಷರಾದ ಧನ್ಯ ರಾಜ್. ಬಿ,ಕೆ.ಉದಯಶಂಕರ ರೈ ಪುಣಚ, ಭವಾನಿ ಶಂಕರ್ ಶೆಟ್ಟಿ ಪುತ್ತೂರು, ಖಜಾಂಜಿ ಅನಾರು ಕೃಷ್ಣಶರ್ಮ, ಈಶ್ವರ ಭಟ್ ಗುಂಡ್ಯಡ್ಕ, ಪುಷ್ಪರಾಜ ಶೆಟ್ಟಿ ಬೈರಮಜಲು, ಕೌಶಿಕ್. ಬಿ, ಕಾರ್ತಿಕ್, ವಿನೀತ್ ಕುಮಾರ್, ಆನಂದ ಮಣ್ಣಾಪು, ಶಿವಪ್ರಸಾದ. ಎಂ, ಮನೋಹರ ಬಾಳೆಹಿತ್ಳು, ಸತೀಶ ಆಚಾರ್ಯ, ವಿಠಲ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.

ಶಂಕರಿ ಶರ್ಮ ಪ್ರಾರ್ಥಿಸಿದರು ಪ್ರತಿಷ್ಠಾನದ ಪುತ್ತೂರು ಘಟಕದ ಅಧ್ಯಕ್ಷರಾದ ಚಂದ್ರಶೇಖರ ಆಳ್ವ ಸ್ವಾಗತಿಸಿ ಸಂಚಾಲಕ ಭಾಸ್ಕರ ಬಾರ್ಯ ವಂದಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ, ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *