Breaking
12 May 2026, Tue

ಬೆಳುವಾಯಿ ಮಿತ್ತಬೆಟ್ಟು ಬರ್ಕೆ ಕುಟುಂಬಸ್ಥರು ಆರಾಧಿಸಿಕೊಂಡು ಬರುತ್ತಿರುವ ಶ್ರೀ ಕೊಡಮಣಿತ್ತಾಯ – ಶ್ರೀ ಪಂಜುರ್ಲಿ ದೈವಗಳ ಪುನರ್ ಪ್ರತಿಷ್ಠೆ ಹಾಗೂ ನೇಮೋತ್ಸವ

ಮೂಡಬಿದಿರೆ: ಬೆಳುವಾಯಿ ಮಿತ್ತಬೆಟ್ಟು ಬರ್ಕೆ ಕುಟುಂಬಸ್ಥರು ಆರಾಧಿಸಿಕೊಂಡು ಬರುತ್ತಿರುವ ಶ್ರೀ ಕೊಡಮಣಿತ್ತಾಯ, ಶ್ರೀ ಪಂಜುರ್ಲಿ ದೈವಗಳ ಪುನರ್ ಪ್ರತಿಷ್ಠೆ ಹಾಗೂ ಶ್ರೀ ಧರ್ಮ ದೈವಗಳ ನೇಮೋತ್ಸವ ಕಾರ್ಯಕ್ರಮಗಳು ಇದೇ ಬರುವ ಮೇ 19ರ ಮಂಗಳವಾರದಿಂದ ಮೇ 21ರ ಗುರುವಾರದವರೆಗೆ ಭಕ್ತಿ ಭಾವದಿಂದ ನಡೆಯಲಿದೆ.

ಮೇ 19ರ ಮಂಗಳವಾರ ಬೆಳಿಗ್ಗೆ ನಾಗಬನದಲ್ಲಿ ಆಶ್ಲೇಷ ಬಲಿ, ತನು ತಂಬಿಲ, ಇತ್ಯಾದಿ ಧಾರ್ಮಿಕ ಸೇವೆಗಳು ಜರುಗಲಿದೆ.
ಸಂಜೆ 5 ಗಂಟೆಯಿಂದ ದೈವಗಳ ಸಾನಿಧ್ಯದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳು ಸೇರಿದಂತೆ ಶ್ರೀ ಕೊಡಮಣಿತ್ತಾಯ, ಹಾಗೂ ಶ್ರೀ ಪಂಜುರ್ಲಿ ದೈವಗಳ ಪುನರ್ ಪ್ರತಿಷ್ಠೆ ಕಾರ್ಯಕ್ರಮಗಳು ಜರಗಲಿದೆ.

ಮೇ 20 ರ ಬುಧವಾರದಂದು ಬೆಳಿಗ್ಗೆ ಶ್ರೀ ಸತ್ಯನಾರಾಯಣ ಮಹಾಪೂಜೆ, ಮುಡಿಪು ಕಟ್ಟುವಿಕೆ, ಶ್ರೀ ಕೊಡಮಣಿತ್ತಾಯ ದೈವ ದ ದರ್ಶನ ಸೇವೆ, ಸೇರಿದಂತೆ ಸಾಯಂಕಾಲ ಶ್ರೀ ಮೂಲ ಮೈಸಂದಾಯ, ಶ್ರೀ ಸತ್ಯದೇವತೆ, ಶ್ರೀ ಧರ್ಮಅರಸು ಉಲ್ಲಾಯ, ಶ್ರೀ ಕೊಡಮಣಿತ್ತಾಯ, ಶ್ರೀ ರಕ್ತೇಶ್ವರಿ, ಶ್ರೀ ಜುಮಾದಿ ಬಂಟ, ಹಾಗೂ ಜಾಗದ ಪಂಜುರ್ಲಿ ದೈವಗಳ ನೇಮೋತ್ಸವ (ಕೋಲ) ಜರುಗಲಿದೆ.

ಮೇ 21ರ ಗುರವಾರದಂದು ಶ್ರೀ ವರ್ತೆ ಪಂಜುರ್ಲಿ, ಶ್ರೀ ಚಾಮುಂಡಿ ಗುಳಿಗ, ಹಾಗೂ ಕುಟುಂಬದ ಶ್ರೀ ಪಂಜುರ್ಲಿ ದೈವಗಳ ನೇಮೋತ್ಸವ ಜರುಗಲಿದೆ.

Leave a Reply

Your email address will not be published. Required fields are marked *