ಬಂಟ್ವಾಳ: ರಾಜ್ಯಮಟ್ಟದ ಮಕ್ಕಳೋತ್ಸವ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡವನ್ನು ಪ್ರತಿನಿಧಿಸಿದ್ದ ಶಾನ್ವಿ ಪೂಜಾರಿ ಹಾಗೂ ಯಶಸ್ವಿ ರಾಷ್ಟ್ರಮಟ್ಟದ ಮಕ್ಕಳೊತ್ಸವಕ್ಕೆ ಆಯ್ಕೆಯಾಗಿದ್ದಾರೆ.
ರಾಜ್ಯಮಟ್ಟದ ಮಕ್ಕಳೋತ್ಸವ ಸ್ಪರ್ಧೆಯಲ್ಲಿ ಭಾಗವಹಿಸಿ ಯಕ್ಷನೃತ್ಯ ಮಾಡಿದಂತ ಪಟ್ಲ ಫೌಂಡೇಶನ್ ಪೂಂಜಾಲಕಟ್ಟೆ ಘಟಕದ ಶಾನ್ವಿ ಪೂಜಾರಿ ಹಾಗೂ ಯಶಸ್ವಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಆರು ನಿಮಿಷದ ಕಾರ್ಯಕ್ರಮವನ್ನು ಕೊಟ್ಟು ಕೇವಲ ಮೂರು ನಿಮಿಷದಲ್ಲಿ ತೀರ್ಪುಗಾರರ ಮೆಚ್ಚುಗೆಗೆ ಪಾತ್ರರಾಗಿ ಮುಂದಿನ ಸುತ್ತಿಗೆ ಆಯ್ಕೆಯಾಗಿ ಪ್ರಶಸ್ತಿಯನ್ನು ಪಡೆದಿದ್ದು, ಮುಂದೆ ರಾಜಸ್ಥಾನದ ಜೈಪುರದಲ್ಲಿ ನಡೆಯುವ ನ್ಯಾಷನಲ್ ಲೆವೆಲ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಅರ್ಹತೆಯನ್ನು ಪಡೆದಿದ್ದಾರೆ.



