Breaking
21 Mar 2026, Sat

ಹಾಡಹಗಲೇ ಕಳ್ಳರ ಕೈಚಳಕ,ಚಿನ್ನಾಭರಣ,ನಗದು ಕದ್ದೊಯ್ದ ಕಳ್ಳರು

ಮಡಂತ್ಯಾರು: ಮನೆಯಲ್ಲಿ ಯಾರೂ ಕೂಡ ಇಲ್ಲದಿದ್ದನ್ನು ಗಮನಿಸಿದ ಕಳ್ಳರ ತಂಡವೊಂದು ಹಾಡಹಗಲೇ ಕೈಚಳಕ ಮೆರೆದ ಘಟನೆ ಬೆಳ್ತಂಗಡಿ ತಾಲೂಕಿನ ಮಾಲಾಡಿ ಗ್ರಾಮದ ಕೊಲ್ಪೆದಬೈಲು ಎಂಬಲ್ಲಿ ನಡೆದಿದೆ. ಕೊಲ್ಪೆದಬೈಲು ನಿವಾಸಿಯಾಗಿರುವ ವಸಂತಿ ಹೆಗ್ಡೆ ಎಂಬವರ ಮನೆಯಲ್ಲಿ ಈ ಕಳ್ಳತನವಾಗಿದೆ.

ಎಪ್ರಿಲ್ 20 ರಂದು ಮಧ್ಯಾಹ್ನ ಮನೆಯ ಯಜಮಾನಿ ವಸಂತಿ ಹೆಗ್ಡೆ, ಅವರ ಮಗ ಹಾಗೂ ಸೊಸೆ ಮನೆಗೆ ಬೀಗ ಹಾಕಿ ಬೆಳ್ತಂಗಡಿ ಕಡೆಗೆ ತೆರಳಿದ್ದಾರೆ.ಈ ವೇಳೆ ಮನೆಯಲ್ಲಿ ಯಾರೂ ಇಲ್ಲದ ಸಮಯವನ್ನು ನೋಡಿ ಕಳ್ಳರು ಮನೆಯ ಮುಂದಿನ ಬಾಗಿಲಿಗೆ ಹಾಕಿರುವ ಬೀಗ ಮುರಿದು ಮನೆಯೊಳಗೆ ಪ್ರವೇಶಿಸಿ ನಗದು ಸೇರಿ ಚಿನ್ನಾಭರಣಗಳನ್ನು ಕಳವು ಮಾಡಿದ್ದಾರೆ.

ಸುಮಾರು 13 ಲಕ್ಷ 72 ಸಾವಿರ ಬೆಲೆಬಾಳುವ ಚಿನ್ನಾಭರಣ ಹಾಗೂ 30,000 ನಗದನ್ನು ಕಳವು ಮಾಡಲಾಗಿದೆ ಅನ್ನುವ ಮಾಹಿತಿ ಇದೆ. ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *