Breaking
22 Mar 2026, Sun

ಹೆದ್ದಾರಿ ಗುಂಡಿಗೆ ಯುವಕ ಬಲಿ,ಕೆಲವರಿಗೆ ಗಾಯ

ಬಜಪೆ: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯ ಕೆಳಗಡೆ ದೊಡ್ಡ ಗುಂಡಿಗೆ ತಲೆಕೆಳಗಾಗಿ ಬಿದ್ದು ಯುವಕನೋರ್ವ ಸಾವನ್ನಪ್ಪಿದ ಘಟನೆ ಮಂಗಳೂರು ಸಮೀಪದ ಬಜಪೆಯಲ್ಲಿ ಶನಿವಾರ ರಾತ್ರಿ ನಡೆದಿದೆ.

ಮೃತಪಟ್ಟ ಯುವಕನನ್ನು ಪೆರ್ಮುದೆಯ ನಿವಾಸಿ ಜೊಸ್ವಾ ಪಿಂಟೋ (27) ಎಂದು ಗುರುತಿಸಲಾಗಿದೆ.

ದಿ| ಎಲಿಯಾಸ್ ಪಿಂಟೋ ಹಾಗೂ ಕಿಸ್ಟಿನ್ ಪಿಂಟೋ ದಂಪತಿಯ ಮೂವರು ಪುತ್ರರಲ್ಲಿ ಹಿರಿಯವರಾಗಿದ್ದ ಜೊಸ್ವಾ ಪಿಂಟೋ ಅವರು ಕುಟುಂಬದ ಅಧಾರ ಸ್ತಂಭವಾಗಿದ್ದರು. ಪ್ರತಿಭಾವಂತ ಆರ್ಟಿಸ್ಟ್ ಆಗಿದ್ದು ಮಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದರು.

ಶನಿವಾರದ ಬಜಪೆ ಚರ್ಚ್ನಲ್ಲಿ ನಡೆದ ಪೂಜೆಯಲ್ಲಿ ಭಾಗವಹಿಸಿ ಮಂಗಳೂರಿಗೆ ತೆರಳಿ ವಾಪಸು ಪೆರ್ಮುದೆಗೆ ಬರುತ್ತಿದ್ದಾಗ ಈ ಅವಘಡ ಸಂಭವಿಸಿದೆ.ಕಾರಿನಲ್ಲಿ ಒಟ್ಟು 5 ಮಂದಿ ಇದ್ದು ಘಟನೆಯಲ್ಲಿ ಇನ್ನೊಬ್ಬರ ಕೈ, ಕಾಲಿಗೆ ಸ್ವಲ್ಪ ಗಾಯವಾಗಿದೆ.

ಮಂಗಳೂರು ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *