Breaking
20 Jun 2026, Sat

ವಕ್ಫ್ ತಿದ್ದುಪಡಿಗೆ ವಿರೋಧ:ಏ.23ರಂದು “ಮುಸ್ಲಿಮ್ ಸಮಾಜ ಬಂಟ್ವಾಳ” ನೇತೃತ್ವದಲ್ಲಿ ಪ್ರತಿಭಟನೆ

ಬಂಟ್ವಾಳ: ಬಿಜೆಪಿ ಕೇಂದ್ರದಲ್ಲಿ ಅಧಿಕಾರ ವಹಿಸಿಕೊಂಡ ನಂತರ ಪದೇ ಪದೇ ಮುಸ್ಲಿಮರ ಧಾರ್ಮಿಕ ಹಕ್ಕುಗಳನ್ನು ಕಸಿಯಲು ಹುನ್ನಾರ ನಡೆಸುತ್ತಿದೆ ಎಂದು ಮುಸ್ಲಿಂ ಸಮಾಜ ಬಂಟ್ವಾಳ ಇದರ ಅಧ್ಯಕ್ಷರಾದ ಕೆ.ಎಚ್ ಅಬೂಬಕ್ಕರ್ ಆಕ್ರೋಶ ವ್ಯಕ್ತಪಡಿಸಿದರು.

ಬಂಟ್ವಾಳದ ಪ್ರೆಸ್ ಕ್ಲಬ್‌ನಲ್ಲಿ ನಡೆದ ಪ್ರತಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಎನ್‌ಆರ್‌ಸಿ , ಸಿಎಎಯಂತಹ ಕಾಯಿದೆಗಳಿಗೆ ಜನ ಸಾಮಾನ್ಯರಿಂದ ಪ್ರಬಲ ವಿರೋಧ ವ್ಯಕ್ತವಾದ ನಂತರ ಇದೀಗ ಸರ್ಕಾರ ವಕ್ಫ್ ತಿದ್ದುಪಡಿ ಕಾನೂನು ಜಾರಿಗೆ ಮುಂದಾಗಿದೆ.

ಮುಸ್ಲಿಮರ ಧಾರ್ಮಿಕ ವಿಷಯಗಳಲ್ಲಿ ಮೂಗು ತೂರಿಸುತ್ತಾ ಅವರ ಸಂವಿಧಾನಾತ್ಮಕ ಹಕ್ಕುಗಳನ್ನೇ ನಿರಾಕರಿಸಲು ಮುಂದಾಗಿದೆ.

ಇದೇ ಹಿನ್ನೆಲೆಯಲ್ಲಿ ” ಮುಸ್ಲಿಮ್ ಸಮಾಜ ಬಂಟ್ವಾಳ” ನೇತೃತ್ವದಲ್ಲಿ ಇದೇ ಬರುವ ಏ.23ರಂದು ಬಂಟ್ವಾಳ ದಂಡಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಬೆಳಗ್ಗೆ 10.00 ರಿಂದ ಸಂಜೆ 4ಗಂಟೆಯವರೆಗೆ “ಬೃಹತ್ ಪ್ರತಿಭಟನಾ ಧರಣಿ” ನಡೆಯಲಿದೆ.

ಇದರಲ್ಲಿ ಬಂಟ್ವಾಳ ತಾಲೂಕಿನ ವಿವಿಧ ರಾಜಕೀಯ ,ಸಾಮಾಜಿಕ, ಧಾರ್ಮಿಕ ಸಂಘಟನೆಗಳ ಮುಖಂಡರು ಭಾಗವಹಿಸಲಿದ್ದಾರೆ ಎಂದರು.

ಈ ಸಂದರ್ಭ ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷರಾದ ಅಬ್ಬಾಸ್ ಅಲಿ, ಕಾರ್ಯದರ್ಶಿಗಳಾದ ಇಕ್ಬಾಲ್ ಐಎಮ್‌ಆರ್, ಇಬ್ರಾಹಿಂ ಕೈಲಾರ್ , ಶಾಹುಲ್ ಹಮೀದ್ , ಹಿರಿಯ ಸದಸ್ಯರಾದ ಶಾಹುಲ್ ಹಮೀದ್,ಎಮ್.ಎಸ್ ಮಹಮ್ಮದ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *