Breaking
22 Mar 2026, Sun

ನರಿಕೊಂಬು ಗ್ರಾಮದ ಮಾರುತಿ ನಗರದ ವೀರಮಾರುತಿ ಅಂಗನವಾಡಿ ಕೇಂದ್ರದ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮ

ಮಕ್ಕಳಿಗೆ ಶಿಕ್ಷಣದ ಜೊತೆ ಸಂಸ್ಕಾರ ಕಲಿಸಿ.. ರುಕ್ಮಯ ಪೂಜಾರಿ

ಬಂಟ್ವಾಳ: ಮಕ್ಕಳಿಗೆ ಶಿಕ್ಷಣದ ಜೊತೆ ಸಂಸ್ಕಾರ ಕಲಿಸಿ. ಮಕ್ಕಳು ಮನೆಯ ಹಿರಿಯರ ನಡತೆಯನ್ನು ಅನುಕರಣೆ ಮಾಡುವುದರಿಂದ ಪೋಷಕರಾದ ನಾವು ಬಹಳ ಜಾಗೃತೆ ವಹಿಸಬೇಕಾಗಿದೆ, ಆಧುನಿಕ ಯಾಂತ್ರಿಕೃತ ಯುಗದಲ್ಲಿ ಉತ್ತಮ ಸಂಸ್ಕಾರ ಪಡೆದ ಮಕ್ಕಳು ಜೀವನದಲ್ಲಿ ದಾರಿ ತಪ್ಪುವುದಿಲ್ಲ ಎಂದು ವಿಟ್ಲ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎ ರುಕ್ಮಯ ಪೂಜಾರಿ ಹೇಳಿದರು.

ಅವರು ಶುಕ್ರವಾರ ಬಂಟ್ವಾಳ ತಾಲೂಕು ನರಿಕೊಂಬು ಗ್ರಾಮ ಪಂಚಾಯತ್ ಸದಸ್ಯ ಪ್ರಕಾಶ್ ಕೋಡಿಮಜಲು ಅವರ ವಿಶೇಷ ಮುತುವರ್ಜಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಬಂಟ್ವಾಳ ತಾಲೂಕು ಪಂಚಾಯತ್, ನರಿಕೊಂಬು ಗ್ರಾಮ ಪಂಚಾಯತ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಬಂಟ್ವಾಳ ಮತ್ತು ಶಿಶು ಅಭಿವೃದ್ದಿ ಯೋಜನೆ ಬಂಟ್ವಾಳ ಇವರ ಸಂಯುಕ್ತ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನರೇಗಾ, ಗ್ರಾಮ ಪಂಚಾಯತ್ ಮತ್ತು ಮಂಗಳೂರು ಎಂ ಆರ್ ಪಿ ಎಲ್ ಇದರ ಸಿ ಎಸ್ ಆರ್ ಅನುದಾನದಲ್ಲಿ ಸುಮಾರು 24 ಲಕ್ಷ ವೆಚ್ಚದಲ್ಲಿ ಹೈಟೆಕ್ ಮಾದರಿಯಲ್ಲಿ ನಿರ್ಮಾಣಗೊಂಡ ನರಿಕೊಂಬು ಗ್ರಾಮದ ಮಾರುತಿ ನಗರದ ವೀರಮಾರುತಿ ಅಂಗನವಾಡಿ ಕೇಂದ್ರದ ಕಟ್ಟಡ ಉದ್ಘಾಟಿಸಿ ಮಾತಾಡಿದರು.

ಪ್ರಗತಿಪರ ಕೃಷಿಕರಾದ ಪದ್ಮನಾಭ ಮಯ್ಯ ಏಲಬೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾದ ಮಾಜಿ ಉಸ್ತುವಾರಿ ಸಚಿವ ಬಿ ರಮಾನಾಥ ರೈ ಮಾತನಾಡಿ ಅಂಗನವಾಡಿ ಕೇಂದ್ರಗಳು ಸೇವಾ ಮನೋಭಾವ ಹೊಂದಿ ಆರೋಗ್ಯವಂತ ಮಕ್ಕಳವನ್ನು ಸಮಾಜಕ್ಕೆ ಕೊಡುವ ಕೇಂದ್ರವಾಗಿದೆ ,ಎಂದರು.

ನರಿಕೊಂಬು ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್ ಮಾತನಾಡಿ ಇಚ್ಚಾ ಶಕ್ತಿ ಇದ್ದರೆ ಒಬ್ಬ ಪಂಚಾಯತ್ ಸದಸ್ಯ ಯಾವ ರೀತಿ ತಮ್ಮ ವಾರ್ಡಿನಲ್ಲಿ ಕೆಲಸ ಮಾಡಬಹುದು ಎಂಬುದಕ್ಕೆ ಪಂಚಾಯತ್ ಸದಸ್ಯರಾದ ಪ್ರಕಾಶ್ ಕೋಡಿಮಜಲ್ ಸ್ಪಷ್ಟ ಉದಾಹರಣೆಯಾಗಿದ್ದಾರೆ. ನರಿಕೊಂಬು ಪಂಚಾಯತ್ ಇತಿಹಾಸದಲ್ಲಿ ಮೊತ್ತ ಮೊದಲ ಬಾರಿಗೆ ಇಷ್ಟೊಂದು ಅನುದಾನವನ್ನು ಉದ್ಯೋಗ ಖಾತರಿ ಮೂಲಕ ಅಂಗನವಾಡಿ ಕೇಂದ್ರದ ಅಭಿವೃದ್ಧಿಗೆ ಬಳಸಲಾಗಿದೆ ಎಂದರು.

ಬಂಟ್ವಾಳ ಶಿಶು ಅಬಿವೃದ್ಧಿ ಯೋಜನಾಧಿಕಾರಿ ಮುಮ್ತಾಜ್ ಎಚ್, ಅಂಗನವಾಡಿ ಕೇಂದ್ರದ ನಾಮಫಲಕ ಅನಾವರಣಗೊಳಿಸಿ ಮಾತನಾಡಿ ಬಂಟ್ವಾಳ ತಾಲೂಕಿನಲ್ಲಿ ಸುಮಾರು 470 ಅಂಗನವಾಡಿಗಳಿದ್ದು ವೀರ ಮಾರುತಿ ಅಂಗನವಾಡಿ ಕೇಂದ್ರ ಅವೆಲ್ಲ ಅಂಗನವಾಡಿಗಳಿಗೆ ಮಾದರಿಯಾಗಿದೆ, ಅಗನವಾಡಿಗಳು ಮಗುವಿನ ಜೀವನ ರೂಪಿಸುವ ಕೇಂದ್ರ ವಾಗಿದೆ,ಅಂತ ಹೇಳಿ ಇಷ್ಟೊಂದು ಸುಂದರ ಅಂಗನವಾಡಿ ನಿರ್ಮಿಸಲು ಸಹಕರಿಸಿದ ಎಲ್ಲರಿಗೂ ಇಲಾಖೆ ಪರವಾಗಿ ಧನ್ಯವಾದ ಅರ್ಪಿಸಿದರು

ಇದೇ ವೇಳೆ ಸದಾಶಿವ ಕುಲಾಲ್ ಮಾರುತಿ ನಗರ, ನರಿಕೊಂಬು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಶೋಭಾ, ಗುತ್ತಿಗೆದಾರ ಶೈಲೇಶ್ ಪೂಜಾರಿ ಕುಚ್ಚಿಗುಡ್ಡೆ, ನಿವೃತ್ತ ಅಂಗನವಾಡಿ ಶಿಕ್ಷಕಿ ಹಾಗೂ ಬಂಟ್ವಾಳ ತಾ ಪಂ ಮಾಜಿ ಅಧ್ಯಕ್ಷೆ ಸುನೀತಾ ಪದ್ಮನಾಭ ಹಾಗೂ ಕು ಪ್ರಮೀಳಾ ಮಾರುತಿನಗರ ಅವರನ್ನು ಗೌರವಿಸಲಾಯಿತು
ವಿಶೇಷ ಸಹಕಾರ ನೀಡಿದ ಮಹನೀಯರಿಗೆ ಸ್ಮರಣೆಕೆ ನೀಡಿ ಗೌರವಿಸಲಾಯಿತು.
ಅಂಗನವಾಡಿ ಮಕ್ಕಳಿಗೆ ಹಾಗೂ ಪೋಷಕರಿಗೆ ನಡೆಸಿದ ಸ್ಪರ್ಧೆಗಳ ಬಹುಮಾನ ವಿತರಿಸಲಾಯಿತು.

ಮಂಗಳೂರು ಲೋಟಸ್ ಗ್ರೂಪ್ ಪಾಲುದಾರ ಜಿತೇಂದ್ರ ಎಸ್ ಕೊಟ್ಟಾರಿ, ನರಿಕೊಂಬು ಚಾರಿಟೇಬಲ್ ಟ್ರಸ್ಟ್ ಬೊಂಡಾಲ ಅಧ್ಯಕ್ಷ ಸಚ್ಚಿದಾನಂದ ಶೆಟ್ಟಿ, ಬಂಟ್ವಾಳ ಶಿಶು ಅಭಿವೃದ್ಧಿ ಮೇಲ್ವಿಚಾರಕಿ ನೀತಾ, ಬಂಟ್ವಾಳ ಕ್ಷೇತ್ರ ಬಿಜೆಪಿ ಅಧ್ಯಕ್ಷ ಚನ್ನಪ್ಪ ಕೋಟ್ಯಾನ್, ಜಿಲ್ಲಾ ಕಾಂಗ್ರೆಸ್ ಸಮಿತಿಯ ಸದಸ್ಯ ಉಮೇಶ್ ಬೋಳಂತೂರು, ಉದ್ಯಮಿ ಸಂದೇಶ ಮಾಣಿಮಜಲು , ಗೊಳ್ತಾಮಜಲ್ ಶಕ್ತಿ ಕೇಂದ್ರದ ಅಧ್ಯಕ್ಷ ಜಿನರಾಜ್ ಕೋಟ್ಯಾನ್ ಮೈರಡ್ಕ, ನರಿಕೊಂಬು ಶಕ್ತಿ ಕೇಂದ್ರದ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಹೊಸಲಚ್ಚಿಲು, ಮಾಜಿ ತಾಲೂಕು ಪಂಚಾಯತ್ ಉಪಾಧ್ಯಕ್ಷ ಆನಂದ ಅಡ್ಡದಪಾದೆ, ವೀರಮಾರುತಿ ವ್ಯಾಯಾಮ ಶಾಲಾ ಟ್ರಸ್ಟ್ ಅಧ್ಯಕ್ಷ ಉಮೇಶ್ ಕೋಡಿಮಜಲು, ಪಂಚಾಯತ್ ಸದಸ್ಯ ಶುಭ ಶಶಿಧರ್,ಪ್ರಕಾಶ್ ಕೋಡಿಮಜಲ್ ನಿವೃತ್ತ ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿ ಸುಧಾ ಜೋಶಿ, ಹರಿನಾಕ್ಷಿ ಮಾಣಿ ಮಜಲ್,ಬಾಲವಿಕಾಸ ಸಮಿತಿಯ ಅಧ್ಯಕ್ಷೆ ಐಶ್ವರ್ಯ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು

ಈ ಕಾರ್ಯಕ್ರಮದ ಪ್ರಯುಕ್ತ  ಅಂಗನವಾಡಿ ಪುಟಾಣಿಗಳಿಂದ,  ಅಂಗನವಾಡಿ ಹಳೆ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ,ಮಾರುತಿನಗರ ಲಾಸ್ಯ ನಾಟ್ಯ ನಿಕೇತನ ತಂಡದಿಂದ ಭರತ ನಾಟ್ಯ, ನರಿಕೊಂಬು ನಿಶಾನಿ ಡ್ಯಾನ್ಸ್ ಗ್ರೂಪ್ ಇವರಿಂದ ನೃತ್ಯ ಕಾರ್ಯಕ್ರಮ, ರವಿಚಂದ್ರ ಮಾಣಿಮಜಲು ಇವರ ನೇತೃತ್ವದ ತಂಡದಿಂದ ಸಂಗೀತ ರಸಮಂಜರಿ,  ಸ್ತ್ರೀ ಶಕ್ತಿ ಹಾಗೂ ಮಕ್ಕಳ ಪೋಷಕರಿಂದ ಸಾಂಸ್ಕøತಿಕ ಕಾರ್ಯಕ್ರಮ ಜರಗಿತು.

ಮಕ್ಕಳು ಪ್ರಾರ್ಥಿಸಿ,ಬಾಲವಿಕಾಸ ಸಮಿತಿಯ ಸದಸ್ಯ ಚಂದ್ರಹಾಸ್ ಕೋಡಿಮಜಲು ಸ್ವಾಗತಿಸಿ, ಅಂಗನವಾಡಿ ಶಿಕ್ಷಕಿ ಶೋಭಾ ವರದಿ ವಾಚಿಸಿ, ನಯನ ಯಾದವ್ ವಂದಿಸಿದರು. ರಾಜೇಶ್ ಕೊಟ್ಟಾರಿ ಕಲ್ಲಡ್ಕ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *