Breaking
4 Feb 2026, Wed

ದ.ಕ.ಜಿ.ಪಂ.ಹಿ. ಪ್ರಾಥಮಿಕ ಶಾಲೆ ಕೊಯಿಲದಲ್ಲಿ ಆಳ್ವಾಸ್ ಪದವಿ ಕಾಲೇಜು (ಸ್ವಾಯತ್ತ) ಮೂಡಬಿದಿರೆ ಇದರ ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರ ಆರಂಭ

ಬಂಟ್ವಾಳ: ರಾಷ್ಟ್ರೀಯ ಸೇವಾ ಯೋಜನೆ ಆಳ್ವಾಸ್ ಪದವಿ ಕಾಲೇಜು (ಸ್ವಾಯತ್ತ) ಮೂಡಬಿದಿರೆ ಇದರ ವಾರ್ಷಿಕ ವಿಶೇಷ ಶಿಬಿರ ವು ದ.ಕ.ಜಿ.ಪಂ.ಹಿ. ಪ್ರಾಥಮಿಕ ಶಾಲೆ ಕೊಯಿಲದಲ್ಲಿ ದಿ. 4-2–2025 ರಿಂದ 10-2–2025ರವರೆಗೆ ನಡೆಯಲಿದ್ದು ಮಂಗಳವಾರದಂದು ಉದ್ಘಾಟನೆಗೊಂಡಿತು.

ಆಳ್ವಾಸ್ ಪದವಿ ಕಾಲೇಜು (ಸ್ವಾಯತ್ತ) ಮೂಡಬಿದಿರೆ ಇದರ ಪರೀಕ್ಷಾ ಕುಲಸಚಿವ ಡಾ.ಎನ್. ಪಿ.ನಾರಾಯಣ ಶೆಟ್ಟಿ ಉದ್ಘಾಟಿಸಿದರು.ಆಳ್ವಾಸ್ ಪದವಿ ಕಾಲೇಜು (ಸ್ವಾಯತ್ತ) ನ ಪ್ರಾಂಶುಪಾಲ ಡಾ. ಕುರಿಯನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕುಲಸಚಿವ ಡಾ.ಎನ್. ಪಿ.ನಾರಾಯಣ ಶೆಟ್ಟಿ ತಮ್ಮ ಅನುಭವವನ್ನ ಶಿಭಿರಾರ್ಥಿಗಳೊಂದಿಗೆ ಹಂಚಿಕೊಂಡರು ಮತ್ತು ನಾಯಕತ್ವದ ಕುರಿತು ಮಾರ್ಗದರ್ಶನ ನೀಡಿದರು.

ಈ ಸಂಧರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಕುರಿಯನ್ ಮಾತನಾಡಿ ಶಿಭಿರಾರ್ಥಿಗಳಿಗೆ ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಅತಿಥಿಯಾಗಿ ಉಪ್ಪಸ್ಥಿತರಿದ್ದ ರೋಟರಿ ಕ್ಲಬ್ ಲೋರೆಟ್ಟೊ ಹಿಲ್ಸ್ ಅಧ್ಯಕ್ಷ, ವಕೀಲರಾದ ಸುರೇಶ್ ಶೆಟ್ಟಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಈ ಸಂಧರ್ಭದಲ್ಲಿ ಸಿದ್ಧಕಟ್ಟೆ ಮೂರ್ತೇದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಜಗದೀಶ್ ಕೊಯಿಲ, ಶಿಕ್ಷಕರ ಸಹಕಾರಿ ಸಂಘ ವಿಟ್ಲ ಇದರ ಅಧ್ಯಕ್ಷ ಶ್ರೀ ರಮೇಶ್ ನಾಯಕ್, ಕೊಯಿಲ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಭಾರತೀ ಬಿ, ಎಸ್ ಡಿ ಎಂ ಸಿ ಅಧ್ಯಕ್ಷ ಜಗದೀಶ್,ಸಿದ್ದಕಟ್ಟೆ ಮೆಸ್ಕಾಂ ಶಾಖಾಧಿಕಾರಿ ಶ್ರೀ ಯೋಗೀಶ್ ಅಂಚನ್ ಉಪಸ್ಥಿತರಿದ್ದು ಶಿಭಿರಾರ್ಥಿಗಳಿಗೆ ಶುಭ ಹಾರೈಸಿದರು.

ಉದ್ಘಾಟನೆಯ ನಂತರ ” ಪ್ಲಾಸ್ಟಿಕ್ ತ್ಯಜಿಸಿ ಬಟ್ಟೆ ಚೀಲ ಬಳಸಿ ಆಂದೋಲನಕ್ಕೆ ಚಾಲನೆ ನೀಡಲಾಯಿತು.ತದನಂತರ ಗಿಡ ನೆಡುವ ಮೂಲಕ ಪರಿಸರ ಜಾಗೃತಿ ಮೂಡಿಸಲಾಯಿತು.

Leave a Reply

Your email address will not be published. Required fields are marked *