ಬಂಟ್ವಾಳ: ಬಂಟ್ವಾಳ ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ಪಾಂಗಲ್ಪಾಡಿ ಶ್ರೀವಿಷ್ಣುಮೂರ್ತಿ ದೇವಸ್ಥಾನದ ಪ್ರತಿಷ್ಠಾ ವರ್ಧಂತಿ ಹಾಗೂ ವರ್ಷಾವಧಿ ಜಾತ್ರೆಯು ವಿವಿಧ ವೈಧಿಕ,ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಫೆ.6ರಿಂದ ಫೆ.8ರವರೆಗೆ ನಡೆಯಲಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಡಾ.ರಾಮಕೃಷ್ಣ ಎಸ್.ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಫೆ.6 ರಂದು ಬೆಳಗ್ಗೆ ತೋರಣ ಮುಹೂರ್ತ, ಶ್ರೀ ಸತ್ಯನಾರಾಯಣ ಪೂಜೆ, ಸಂಜೆ ಪಡು ಸವಾರಿ, ಕಟ್ಟೆ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮ, ನನ ಏತ್ ದಿನ ತುಳು ನಾಟಕ ನಡೆಯಲಿದೆ.ಫೆ.7ರಂದು ದರ್ಶನೋತ್ಸವ, ಸಂಜೆ ಮೂಡು ಸವಾರಿ, ದೇವರ ಉತ್ಸವ, ಹರಿಣಿ ಕಲಾವಿದರಿಂದ ತೆಲಿಕೆದ ತಮ್ಮನ ಕಾರ್ಯಕ್ರಮ ನಡೆಯಲಿದೆ. ಫೆ.8ರಂದು ದಿವ್ಯ ದರ್ಶನ, ವಿಷ್ಣುಯಾಗ ತುಲಾಭಾರ ಸೇವೆ, ರಾತ್ರಿ ನಡೆಯುವ ಧಾರ್ಮಿಕ ಸಭೆಯಲ್ಲಿ ಗುರುವಾಯನಕೆರೆ ವೈದ್ಯ ಡಾ.ವೇಣುಗೋಪಾಲ ಶರ್ಮ ಅವರಿಗೆ ವಿಷ್ಣುಪ್ರಸಾದ ಪ್ರಶಸ್ತಿ ಪ್ರದಾನ ನಡೆಯಲಿದೆ.
ಬಳಿಕ ತಾಂಬೂಲ ಕಲಾವಿದರಿಂದ “ಎಲ್ಲೆ ದಾದ ಏರೆಗ್ ಗೊತ್ತು” ತುಳು ನಾಟಕ ಪ್ರದರ್ಶನವಿದೆ. ನಂತರ ದೈವ-ದೇವರು ಭೇಟಿ, ಗಗ್ಗರ ಸೇವೆ ನಡೆಯಲಿದೆ. ಫೆ.9ರಂದು ಸಂಪ್ರೋಕ್ಷಣೆ, ರಂಗಪೂಜೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.


