ಸಿದ್ದಕಟ್ಟೆ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಬಂಟ್ವಾಳ : ಹಿಂದೂ ಹಿತರಕ್ಷಣಾ ವಿಶ್ವಸ್ಥ ಮಂಡಳಿ ಟ್ರಸ್ಟ್, ಸಂಗಬೆಟ್ಟು ಮಂಡಲ ಸಿದ್ದಕಟ್ಟೆ ಇದರ ಆಶ್ರಯದಲ್ಲಿ ನಡೆಯುವ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಸಿದ್ದಕಟ್ಟೆಯ ಪಲ್ಗುಣಿ ಸಭಾಭವನದಲ್ಲಿ ಇಂದು ನಡೆಯಿತು.

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ಗಣೇಶ್ ಶೆಟ್ಟಿ ಗೋಳಿದೊಟ್ಟು ಇವರು ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು.

ಈ ಸಂದರ್ಭ ಸಮಿತಿಯ ಗೌರವ ಅಧ್ಯಕ್ಷರಾದ ಕೆ ರವೀಂದ್ರ ನಾಯಕ್ ಕರ್ಪೆ, ಪ್ರವೀಣ್ ಪೂಜಾರಿ ಕುಪ್ಪೆಟ್ಟು ಪ್ರಧಾನ ಕಾರ್ಯದರ್ಶಿ, ಹಾಗೂ ಸಮಿತಿಯ ಮಹಿಳಾ ಅಧ್ಯಕ್ಷರಾದ ಶ್ರೀಮತಿ ತಾರಾ, ಹಿಂದೂ ಹಿತರಕ್ಷಣಾ ವಿಶ್ವಸ್ಥ ಮಂಡಳಿ ಟ್ರಸ್ಟ್ ಸಂಗಬೆಟ್ಟು ಮಂಡಲ ಇದರ ಅಧ್ಯಕ್ಷರಾದ ಶ್ರೀ ಯಶೋಧರ ಗೌಡ ಕೋರ್ಯಾರು,ಸಿ ಎ ಬ್ಯಾಂಕ್ ಅಧ್ಯಕ್ಷ ಪ್ರಭಾಕರ ಪ್ರಭು ಉಪಸ್ಥಿತರಿದ್ದರು.

ಹಿಂದೂ ಹಿತರಕ್ಷಣಾ ವಿಶ್ವಸ್ಥ ಮಂಡಳಿ ಟ್ರಸ್ಟ್ ಸಂಗಬೆಟ್ಟು ಮಂಡಲ ಮತ್ತು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳು, ಊರ ಗಣ್ಯರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *