ಅಹಮದಾಬಾದ್: ಇತ್ತೀಚೆಗೆ ನಡೆದ ಏರ್ ಇಂಡಿಯಾ ದುರಂತಕ್ಕೆ 260 ಜನರು ಪ್ರಾಣಕಳೆದುಕೊಂಡಿದ್ದು ಈ ವಿಮಾನ ಅಪಘಾತದ ಕುರಿತಾಗಿ ತನಿಖಾ ಬ್ಯೂರೋ ಪ್ರಾಥಮಿಕ ವರದಿ ಬಹಿರಂಗಗೊಂಡಿದೆ.

ಟೇಕ್ ಆಫ್ ಆದ 3 ಸೆಕೆಂಡ್‌ಗಳಲ್ಲಿ ಎರಡೂ ಎಂಜಿನ್‌ಗಳ ಪ್ಯೂಯಲ್ ಕಂಟ್ರೋಲ್ ಸ್ವಿಚ್‌ಗಳು ‘ರನ್’ ನಿಂದ ‘ಕಟ್‌ಆಫ್’ ಗೆ ಬದಲಾಗಿದ್ದರಿಂದ, ಥ್ರಸ್ಟ್ ಕಡಿಮೆಯಾಗಿದ್ದು ಪೈಲಟ್‌ಗಳ ಕಾಕ್‌ಪಿಟ್ ಧ್ವನಿ ರೆಕಾರ್ಡ್‌ನಲ್ಲಿ ಏಕೆ ಎಂಜಿನ್ ಕಟ್‌ಆಫ್ ಮಾಡಿದ್ರಿ ಎಂದು ಕೇಳಿದಾಗ ನಾನು ಮಾಡಿಲ್ಲ ಎಂಬ ಸಂಭಾಷಣೆ ಅದರಲ್ಲಿ ಕೇಳಿಬಂದಿದ್ದು, ಇದರಿಂದ ತಾಂತ್ರಿಕ ದೋಷ ಅಥವಾ ಆಕಸ್ಮಿಕ ತೊಂದರೆ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.

ಇಂಜಿನ್‌ಗಳು ಆಫ್ ಆಗಿದ್ದಾಗಲೂ ವಿಮಾನವು 8 ಡಿಗ್ರಿ ಮೂಗು ಮೇಲಕ್ಕೆತ್ತಿದ ಸ್ಥಿತಿಯಲ್ಲಿದ್ದು, ಆಕಸ್ಮಿಕವಾಗಿ ಕೆಳಕ್ಕೆ ಬಿದ್ದು, ಪೈಲಟ್‌ಗಳು ಎಂಜಿನ್-1 ಅನ್ನು ಮರುಪ್ರಾರಂಭಿಸಲು ಪ್ರಯತ್ನಿಸಿ ಯಶಸ್ವಿಯಾದರೂ, ಎಂಜಿನ್-2 ಚಾಲನೆಗೆ ಆಗದೆ ವಿಫಲವಾಗಿದೆ. ತುರ್ತು ವಿದ್ಯುತ್ ಪೂರೈಕೆಗಾಗಿ ರಾಮ್ ಏರ್ ಟರ್ಬೈನ್ (RAT) ಸಕ್ರಿಯಗೊಂಡಿದೆ ಎಂದು ತಿಳಿದು ಬಂದಿದೆ.




