Breaking
20 Sep 2026, Sun

ಉಜಿರೆಯ ಅನುಗ್ರಹ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ

ಉಜಿರೆ: ಅನುಗ್ರಹ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘ ದ ಉದ್ಘಾಟನೆಯು ಕಾಲೇಜಿನ ಆಡಿಟೋರಿಯಂನಲ್ಲಿ ಜು.12 ರಂದು ನಡೆಯಿತು.

ಸಂಸ್ಥೆಯ ಸಂಚಾಲಕರಾದ ವಂದನೀಯ. ಫಾ. ಅಬೆಲ್ ಲೋಬೊ ಉದ್ಘಾಟಿಸಿ ನೂತನ ವಿದ್ಯಾರ್ಥಿ ಸಂಘಕ್ಕೆ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ವಾಣಿ ಪದವಿ ಕಾಲೇಜಿನ ಗಣಕ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಸುಧಿರ್ ಕೆ.ಎನ್ ಮಾತನಾಡಿ ನಾಯಕನಾದವನು ತಪ್ಪುಗಳನ್ನು ತನ್ನಮೇಲೆ ಹೊತ್ತುಕೊಂಡು ಶ್ರೇಯಸ್ಸನ್ನು ಎಲ್ಲರಿಗೂ ಕೊಡುತ್ತಾನೆ ಎಂದು ಹೇಳಿ, ವಿದ್ಯಾರ್ಥಿಗಳಿಗೆ ನಾಯಕತ್ವದ ಉಪಯೋಗ ಹಾಗೂ ವ್ಯಕ್ತಿತ್ವ ವಿಕಾಸನದ ಬಗ್ಗೆ ಮಾಹಿತಿ ನೀಡಿ ಶುಭಹಾರೈಸಿದರು.

ಕಾಲೇಜಿನ ಪ್ರಾಂಶುಪಾಲರಾದ ವಂ. ಫಾ ವಿಜಯ್ ಲೋಬೊ ನೂತನ ವಿದ್ಯಾರ್ಥಿ ನಾಯಕರಿಗೆ ಪ್ರತಿಜ್ಞಾ ವಿಧಿಯನ್ನು ಭೋದಿಸಿದರು.

ವಿದ್ಯಾರ್ಥಿ ಸೆಬಾಸ್ಟಿನ್ ಸ್ವಾಗತಿಸಿ, ವಿದ್ಯಾರ್ಥಿ ಸಂಘದ ನಾಯಕಿ ಹೆಝಲ್ ಜಿಷಾ ಪಿಂಟೋ ಧನ್ಯವಾದ ಸಮರ್ಪಿಸಿದರು. ವಿಶ್ವಾಸ್ ವೇಗಸ್ ಕಾರ್ಯಕ್ರಮ ನಿರೂಪಿಸಿದರು. ನಾಡಗೀತೆಯೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.

Leave a Reply

Your email address will not be published. Required fields are marked *