Breaking
25 Mar 2026, Wed

ದೇರಳಕಟ್ಟೆ: ರಸ್ತೆ ದಾಟುವಾಗ ಬೊಲೆರೊ ವಾಹನ ಢಿಕ್ಕಿ – ಮಹಿಳೆ ಸ್ಥಳದಲ್ಲೇ ಸಾವು

ಉಳ್ಳಾಲ: ದೇರಳಕಟ್ಟೆಯಲ್ಲಿ ರಸ್ತೆಯನ್ನು ದಾಟುವ ವೇಳೆ ಮಹಿಳೆಗೆ ಬೊಲೆರೊ ವಾಹನವೊಂದು ಢಿಕ್ಕಿ ಹೊಡೆದು ಮಹಿಳೆ ಸ್ಥಳದಲ್ಲೇ ಮೃತಪಟ್ಟ ಘಟನೆ ಜು.12 ರಂದು ನಡೆದಿದೆ.

ಮೃತ ಮಹಿಳೆಯನ್ನು ಕೇರಳ ಮೂಲದ 58 ವರ್ಷದ ಶ್ರೀಮತಿ ಕಮಲ ಎಂದು ಗುರುತಿಸಲಾಗಿದೆ.

ಶ್ರೀ ಕಮಲ ಅವರು ಅಪಾರ್ಟ್ ಮೆಂಟ್ ಗೆ ಹೋಗಲು ರಸ್ತೆ ದಾಟುತ್ತಿದ್ದ ವೇಳೆ ಬೊಲೆರೊ ವಾಹನವು ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *