Breaking
20 Sep 2026, Sun

ದನ ಕಳವು ಪ್ರಕರಣ : ಇಬ್ಬರು ಆರೋಪಿಗಳ ಬಂಧನ- 4 ದನಗಳ ರಕ್ಷಣೆ

ಉಡುಪಿ : ದನ ಕಳ್ಳತನ ಮಾಡಿ ಸಾಗಾಟನೆಗೆ ಯತ್ನಿಸಿದ ಘಟನೆಯು ಜು 13 ರಂದು ಬೈಂದೂರಿನಲ್ಲಿ ನಡೆದಿದೆ.

ಈ ಖಚಿತ ಮಾಹಿತಿ ಮೇರೆಗೆ ಪೊಲೀಸರು ದನಕಳ್ಳತನಕ್ಕೆ ಉಪಯೋಗಿಸಿದ ಮೂರು ಕಾರುಗಳನ್ನು ವಶಕ್ಕೆ ಪಡೆದಿದ್ದು, ಕಾರಿನಲ್ಲಿ ಸಾಗಾಟ ಮಾಡಿದ 4 ದನಗಳನ್ನು ರಕ್ಷಿಸಿ ಗೋಶಾಲೆ ಸೇರಿಸಲಾಗಿದೆ.

ಪ್ರಕರಣಕ್ಕೆ ಸಂಬಂದಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಸಾಸ್ತಾನ ನಿವಾಸಿ ಮುಹಮ್ಮದ್ ಕೈಪ್ ಮತ್ತು ಉಚ್ಚಿಲ ಕಾಪು ನಿವಾಸಿ ಮುಹಮ್ಮದ್ ಸುಹೇಲ್ ಖಾದರ್ ಎಂದು ಗುರುತಿಸಲಾಗಿದೆ

ಆರೋಪಿಗಳ ಪತ್ತೆ ಬಗ್ಗೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಹರಿರಾಮ್ ಶಂಕರ ರವರ ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸುಧಾಕರ ನಾಯ್ಕ್ ಹಾಗೂ ಪರಮೇಶ್ವರ ಹೆಗಡೆ ಉಡುಪಿ ಜಿಲ್ಲೆ ಮತ್ತು ಹೆಚ್ ಡಿ ಕುಲಕರ್ಣಿ ಉಪಾಧೀಕ್ಷಕರು ಕುಂದಾಪುರ ಉಪ ವಿಭಾಗರವರ ನಿರ್ದೇಶನದಂತೆ ಸವೀತ್ರ ತೇಜ್ ಪೊಲೀಸ್ ವೃತ್ತ ನಿರೀಕ್ಷಕರು ಬೈಂದೂರು ರವರ ನೇತೃತ್ವದಲ್ಲಿ ದನ ಕಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ಮತ್ತು ಪತ್ತೆಗೆ 3 ತಂಡಗಳಾಗಿ ನೇಮಕ ಮಾಡಲಾಗಿತ್ತು.

ತಂಡದ ನೇತೃತ್ವವನ್ನು ತಿಮ್ಮೇಶ್ ಬಿ ಎನ್, ಪಿ.ಎಸ್.ಐ., ನವೀನ ಬೋರಕರ ಪಿ.ಎಸ್.ಐ., ಬೈಂದೂರು ಠಾಣೆ , ವಿನಯ ಪಿ.ಎಸ್.ಐ., ಕೊಲ್ಲೂರು ಠಾಣೆ , ಬಸವರಾಜ್ ಪಿ.ಎಸ್.ಐ. ಗಂಗೋಳ್ಳಿ ಠಾಣೆ ಮತ್ತು ಸಿಬ್ಬಂದಿ ನಾಗೇಂದ್ರ, ಮೋಹನ, ಸುರೇಶ್, ಚೇತನ್, ಜಯರಾಮ, ಸತೀಶ್, ಚಿದಾನಂದ, ಮಾಳಪ್ಪ ದೇಸಾಯಿ, ಶ್ರೀಧರ ಪಾಟೀಲ್, ಪರಯ್ಯ ಮಠಪತಿರವರ ತಂಡ ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Leave a Reply

Your email address will not be published. Required fields are marked *