Breaking
17 Aug 2025, Sun

ಶ್ರೀ ಮಂತ್ರದೇವತಾ ಕ್ಷೇತ್ರ ಸಾನಿದ್ಯ ಕಟ್ಟೆಮಾರು, ಶ್ರೀ ಮಂತ್ರ ದೇವತೆ, ಸ್ವಾಮಿ ಕೊರಗಜ್ಜ ಮತ್ತು ಶ್ರೀ ಗುಳಿಗ ದೈವಗಳ ವೈಭವದ ವಾರ್ಷಿಕ ಕೋಲೋತ್ಸವ

ಬಂಟ್ವಾಳ : ಬಂಟ್ವಾಳ ತಾಲೂಕಿನ ಶ್ರೀ ಮಂತ್ರ ದೇವತಾ ಕ್ಷೇತ್ರ ಸಾನಿದ್ಯ ಕಟ್ಟೆಮಾರು ಶ್ರೀ ಮಂತ್ರ ದೇವತೆ, ಸ್ವಾಮಿ ಕೊರಗಜ್ಜ ಮತ್ತು ಶ್ರೀ ಗುಳಿಗ ದೈವಗಳ ವೈಭವದ ವಾರ್ಷಿಕ ಕೋಲೋತ್ಸವ ಕಾರ್ಯಕ್ರಮವು ದಿನಾಂಕ 11-2-2025 ನೇ ಮಂಗಳವಾರ ದಿಂದ 13-2-2025 ನೇ ಗುರುವಾರ ತನಕ ನಡೆಯಲಿರುವುದು.

ದಿನಾಂಕ 11-2-2025 ನೇ ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಸತ್ಯನಾರಾಯಣ ಪೂಜೆ ನಡೆದು ನಂತರ ದೈವದ ದರ್ಶನ ಸೇವೆ ಬಲಿಕ ಅನ್ನದಾನ ಜರಗಲಿರುವುದು. ಮಧ್ಯಾಹ್ನ ಗಂಟೆ 2 ರಿಂದ ವಿವಿಧ ಭಜನಾ ಮಂಡಳಿಗಳ ಬಜನಾ ತಂಡದಿಂದ ಭಜನಾ ಸಂಕೀರ್ತನೆ ನೆರವೇರಲಿರುವುದು.

ಸಂಜೆ ಗಂಟೆ 6 ರಿಂದ ಚಿಂತಾಮಣಿ ಡ್ಯಾನ್ಸ್ ಗ್ರೂಪ್ ಕಡೇಶಿವಾಲಯ ಇವರಿಂದ ಭಕ್ತಿ ಪ್ರಧಾನ ಕಾರ್ಯಕ್ರಮ ನಡೆಯಲಿದ್ದು, ಸಂಜೆ 7:00 ಗಂಟೆಗೆ ಮೋಹನ್ ಚೌಟ ಪುಂಚೋಳಿಮಾರು ಗುತ್ತು ರವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ಜಯಗಳಿರುವುದು. ಮಧ್ಯ ಪ್ರದೇಶ ಉಜ್ಜಯಿನಿ ಯ ಅಖಿಲ ಭಾರತೀಯ ನಾಥ ಸಂಪ್ರದಾಯ ಬರ್ತ್ರ್ ವರಿ ಗುಫಾ ಮಠಾಧೀಶರಾದ ಪರಮಪೂಜ್ಯ ಯೋಗಿ ಪೀರ್ ರಾಮನಾಥ್ ಜಿ ಮಹಾರಾಜ್ ಆಶೀರ್ವಚನ ನೀಡಲಿರುವರು. ಮುಖ್ಯ ಅತಿಥಿಗಳಾಗಿ ಮುಳಿ ಯ ಜುವೆಲರ್ಸ್ ಪುತ್ತೂರಿನ ಚೇರ್ ಮ್ಯಾನ್ ಕೇಶವ ಪ್ರಸಾದ್ ಮುಳಿಯ, ಶರತ್ ಶೆಟ್ಟಿ ಉದ್ಯಮಿ ಸುರಭಿ ಬಾರ್ ಅಂಡ್ ರೆಸ್ಟೋರೆಂಟ್ ಮಡಿಕೇರಿ, ಹರೀಶ್ ಶೆಟ್ಟಿ ಚಿಂಬೂರು ಮುಂಬೈ, ಅಶೋಕ್ ಪೂಜಾರಿ ಮುಂಬೈ, ಪ್ರಶಾಂತ್ ಬನ್ನನ್ ಮಾಲಕರು ತಾಜ್ ರೆಸಿಡೆನ್ಸಿ ಮಂಗಳೂರು, ಆಶ್ರಿತ್ ಕಿಶನ್ ಹೆಬ್ಬೇವು ಫಾರ್ಮ್ಸ್ ಫೆನ್ ಕೊಂಡ, ದಿನ ರಾಜ್ ಸಂಜೀವ ಪೂಜಾರಿ ದೇರಾಜೆ, ತಾರನಾಥ ಪೂಜಾರಿ ಹೋಟೆಲ್ ನಿಲ್ ಕಮಲ್ ಉಡುಪಿ, ಪ್ರವೀಣ್ ಕೊಟ್ಟಾರಿ ರಾಯಪ್ಪ ಕೋಡಿ, ತಾರನಾಥ ಸಾಲಿಯಾನ್ ಎ ಇ ಇ, ನಟೇಶ್ ಪೂಜಾರಿ ಪುಳಿತಡಿ, ಧನರಾಜ್ ಪೂಜಾರಿ, ಬೆಂಗಳೂರು ಮೊದಲಾದವರು ಭಾಗವಹಿಸಲಿರುವರು.

ಸಭಾ ಕಾರ್ಯಕ್ರಮದ ಬಳಿಕ *ದೊಂದಿಬೆಳಕಿನಲ್ಲಿ ಶ್ರೀ ಮಂತ್ರ ದೇವತೆ ದೈವದ ವೈಭವದ ಕೋಲೊತ್ಸವ ಜರಗಲಿರುವುದು. ದಿನಾಂಕ 12-2-2025 ನೇ ಬುಧವಾರ ಸಂಜೆ 7:00ಗೆ ಸ್ವಾಮಿ ಕೊರಗಜ್ಜ ಹಾಗೂ ಶ್ರೀ ಗುಳಿಗ ದೈವಗಳ ಕೋಲೊತ್ಸವ ನಡೆಯಲಿರುವುದು. ದಿನಾಂಕ 13-5-2025 ರಂದು ದೈವಗಲಿಗೆ ಅಗೇಲು ಸೇವೆ ಜರಗಲಿರುವುದು. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ದೈವದ ಗಂಧ ಪ್ರಸಾದ ಸ್ವೀಕರಿಸಿ ದೈವದ ಕೃಪೆಗೆ ಪಾತ್ರರಾಗಬೇಕಾಗಿ ಶ್ರೀ ಮಂತ್ರ ದೇವತಾ ಸಾನಿದ್ಯ ಕಟ್ಟೆಮಾರಿನ ಧರ್ಮದರ್ಶಿ ಶ್ರೀ ಮನೋಜ್ ಕುಮಾರ್ ಕಟ್ಟೆಮಾರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Leave a Reply

Your email address will not be published. Required fields are marked *