Breaking
3 Aug 2026, Mon

ಮೈಸೂರು: ಹೂಟಗಳ್ಳಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ

ಹೂಟಗಳ್ಳಿಯ ಕೆ.ಎಚ್.ಬಿ. ಕಾಲೋನಿಯ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘ, ನಗರಸಭೆ ಹೂಟಗಳ್ಳಿ ಹಾಗೂ ಲಯನ್ಸ್ ಕ್ಲಬ್ ಆಫ್ ಮೈಸೂರ್ ಎಲೈಟ್ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮವನ್ನು ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀ ಶಿವಮೂರ್ತಿ ಅವರು ಗಣ್ಯರ ಸಮ್ಮುಖದಲ್ಲಿ ಉದ್ಘಾಟಿಸಿದರು. ನಾರಾಯಣ ಆಸ್ಪತ್ರೆ ಹಾಗೂ ವಾಸನ್ ಐ ಕೇರ್ ಕಣ್ಣಿನ ಆಸ್ಪತ್ರೆಯ ನುರಿತ ವೈದ್ಯರು ಸಾರ್ವಜನಿಕರಿಗೆ ಆರೋಗ್ಯ ಮತ್ತು ಕಣ್ಣಿನ ತಪಾಸಣೆ ನಡೆಸಿದರು. ಶಿಬಿರದಲ್ಲಿ 150ಕ್ಕೂ ಅಧಿಕ ಸಾರ್ವಜನಿಕರು ಭಾಗವಹಿಸಿ ಆರೋಗ್ಯ ಸೇವೆಯ ಪ್ರಯೋಜನ ಪಡೆದರು.

ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎನ್.ಟಿ. ದಾಸೇಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ಸುರೇಶ್, ಖಜಾಂಚಿ ಮೋಹನ್ ಹಾಗೂ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

ಮುಖ್ಯ ಅತಿಥಿಗಳಾಗಿ ಸಾತನೂರು ದೇವರಾಜ್, ಮಾಜಿ ಅಧ್ಯಕ್ಷರಾದ ಕೃಷ್ಣನ್, ಬಾಲಕೃಷ್ಣ, ಧರ್ಮರಾಜು ಹಾಗೂ ಬೆಟ್ಟೇಗೌಡ ಅವರು ಭಾಗವಹಿಸಿದರು. ಲಯನ್ಸ್ ಕ್ಲಬ್ ಆಫ್ ಮೈಸೂರ್ ಎಲೈಟ್ ಅಧ್ಯಕ್ಷ ಲಯನ್ ಹನುಮಂತಪ್ಪ ಮೇಟಿ, ಕಾರ್ಯದರ್ಶಿ ಲಯನ್ ಸುರೇಶ್ ಬಿ.ಕೆ., ಖಜಾಂಚಿ ಲಯನ್ ಪಾರ್ಥ, ಲಯನ್ ಚಂದ್ರಿಕಾ ಪಾರ್ಥ, ಲಯನ್ ರಕ್ತದಾನಿ ಮಂಜು ಹಾಗೂ ಲಯನ್ ಯಾದವ್ ಹರೀಶ ಉಪಸ್ಥಿತರಿದ್ದರು.

ಹೂಟಗಳ್ಳಿಯ ಜಿ.ಡಿ.ಎಸ್. ಮುಖಂಡ ಶ್ರೀ ಸುರೇಶ್, ಶ್ರೀ ಡೈರಿ ಸಿದ್ದರಾಜು, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಶ್ರೀ ವಿಜಯಕುಮಾರ್ ಸೇರಿದಂತೆ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ಎಲ್ಲಾ ಪದಾಧಿಕಾರಿಗಳು, ಮಹಿಳಾ ಪದಾಧಿಕಾರಿಗಳು, ಸದಸ್ಯರು ಹಾಗೂ ಕುಲಬಾಂಧವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಶಿಬಿರವನ್ನು ಯಶಸ್ವಿಗೊಳಿಸಿದರು.

ಕಾರ್ಯಕ್ರಮಕ್ಕೆ ಸ್ಥಳಾವಕಾಶ ಕಲ್ಪಿಸಿದ ಕೆಂಪೇಗೌಡರ ಶ್ರೀ ವಿದ್ಯಾ ಕಾನ್ವೆಂಟ್, ಕೆ.ಎಚ್.ಬಿ. ಕಾಲೋನಿ, ಹೂಟಗಳ್ಳಿ ಆಡಳಿತ ಮಂಡಳಿಗೆ ಸಂಘದ ವತಿಯಿಂದ ಕೃತಜ್ಞತೆ ಸಲ್ಲಿಸಲಾಯಿತು. ಸಂಘದ ವತಿಯಿಂದ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಲಾಯಿತು.

Leave a Reply

Your email address will not be published. Required fields are marked *